

ಕುಶಾಲನಗರ: ಮೈಸೂರಿನ ಕಡೆಗೆ ಅಕ್ರಮವಾಗಿ ಹರಳು ಕಲ್ಲು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಮಾಲು ಸಹಿತ ವಶಕ್ಕೆ ಪಡೆಯಲಾಗಿದೆ.
ಮಡಿಕೇರಿಯಿಂದ ಮೈಸೂರಿನ ಕಡೆಗೆ ಹರಳು ಕಲ್ಲು ಸಾಗಿಸುತ್ತಿದ್ದ ಸಂದರ್ಭ ಕುಶಾಲನಗರ ಅರಣ್ಯ ತಪಾಸಣಾ ಗೇಟ್‌ನಲ್ಲಿ ಮಂಗಳವಾರ ಮುಂಜಾನೆ 4 ಗಂಟೆಯಲ್ಲಿ ತಪಾಸಣೆಯಲ್ಲಿದ್ದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಮಡಿಕೇರಿಯ ರಾಣಿಪೇಟೆಯ ಎಂ.ಜಿ.ಶಿವಪ್ರಸಾದ್(35), ಮಹದೇವಪೇಟೆಯ ಎಂ.ಎಂ.ಜಬೀರ್ (40), ಆಜಾದ್ ನಗರದ ಎಂ.ಎ.ರಿಜ್ವಾನ್ (45) ಆರೋಪಿಗಳು. ಪಿಕ್‌ಅಪ್ ವಾಹನಕ್ಕೆ ಬೆಂಗಾವಲಾಗಿ ಸಂಚರಿಸುತ್ತಿದ್ದ ಆಲ್ಟೊ ಕಾರನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್, ಉಪವಲಯ ಅರಣ್ಯ ಅಧಿಕಾರಿ ದೇವಯ್ಯ, ಸಿದ್ದರಾಮಯ್ಯ ನಾಟಿಕಾರ್, ತಳವಾರ್, ಗೇಟ್ ಸಿಬ್ಬಂದಿ ಮೇದಪ್ಪ, ಆರ್‌ಆರ್‌ಟಿ ತಂಡದ ಧರ್ಮರಾಜು ಇದ್ದರು.