ಸರಗಳ್ಳನ ಬಂಧನ

ಸರಗಳ್ಳನ ಬಂಧನ
Published on

ಅರಸೀಕೆರೆ: ನಗರ ಸೇರಿದಂತೆ ವಿವಿಧೆಡೆ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಗರಠಾಣೆ ಪೊಲೀಸರು ಸೋಮವಾರ ಮಾಲು ಸಹಿತ ಬಂಧಿಸಿದ್ದಾರೆ.

ಹಾಸನ ರಸ್ತೆ ಬಲಭಾಗದ ಬಡಾವಣೆಯಲ್ಲಿ ವಾಸವಿರುವ ಧಾರವಾಡ ಮೂಲದ ಮನು(30) ಬಂಧಿತ ಆರೋಪಿಯಾಗಿದ್ದು, ಅಂದಾಜು 10,96,200 ರೂ. ಮೌಲ್ಯದ 189 ಗ್ರಾಂ ಮೌಲ್ಯದ ಮಾಂಗಲ್ಯಸರ ಸೇರಿದಂತೆ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ರೈಲ್ವೆ ನಿಲ್ದಾಣದ ಬಳಿ ಆರೋಪಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಜಾವಗಲ್, ಬಾಣಾವರ, ಕಸಬಾ ಹಾಗೂ ನಗರಠಾಣೆಯ ವ್ಯಾಪ್ತಿಯಲ್ಲಿ ಮಹಿಳೆಯರನ್ನು ಗುರಿಯಾಗಿಸಿ ಕಳವು ಮಾಡುತ್ತಿರುವುದಾಗಿ ತನಿಖೆ ವೇಳೆ ಗೊತ್ತಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿವೈಎಸ್ಪಿ ಲೋಕೇಶ್, ಗ್ರಾಮಾಂತರ ಠಾಣೆಯ ಸಿಪಿಐ ರಾಘವೇಂದ್ರ ಪ್ರಕಾಶ್, ನಗರಠಾಣೆ ಪ್ರಭಾರ ಇನ್ಸ್‌ಪೆಕ್ಟರ್ ವಿಜಯಕ್ರಾಂತಿ, ಬಾಣಾವರ ಠಾಣೆಯ ಪಿಎಸ್‌ಐ ಸುರೇಶ್, ಎಎಸ್‌ಐ ಕುಮಾರ್, ಸುರೇಶ್, ಪಕ್ರುದ್ದೀನ್, ರಮೇಶ್, ಸಿದ್ದೇಶ್, ಮೋಹನ್‌ನಾಯ್ಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net