ಕೊಲೆ ಆರೋಪಿಯ ಬಂಧನ

Published on

ಚಿಂತಾಮಣಿ: ನಗರದ ಎಂ.ಜಿ.ರಸ್ತೆಯ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ 2 ಹಣ್ಣಿನ ಅಂಗಡಿಗಳು ಅಕ್ಕಪಕ್ಕದಲ್ಲಿದ್ದು, ಅಲ್ಲಿ ಕೆಲಸ ಮಾಡುವ ಇಬ್ಬರ ನಡುವೆ ಗಲಾಟೆಯಾಗಿ ಅರ್ಬಾಜ್​ (24) ಎಂಬಾತನ ಕೊಲೆಯಲ್ಲಿ ಅಂತ್ಯವಾಗಿದೆ. ಕೋಲೆ ಆರೋಪಿ ಪಹಾದ್​ನ್ನು ಚಿಂತಾಮಣಿ ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಗ್ಗೆ ಮೃತನ ತಂದೆ ನಗರದ ನಾರಸಿಂಹಪೇಟೆಯಲ್ಲಿ ವಾಸವಾಗಿರುವ ನಿಜಾಮ್​ ವುದ್ದೀನ್​ ಎಂಬವವರು ನಗರಠಾಣೆಗೆ ದೂರು ನೀಡಿದ್ದಾರೆ. ನಗರದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿನ ಹಣ್ಣಿನ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ನನ್ನ ಮಗ ಹಾಗೂ ಆತ ಕೆಲಸ ಮಾಡುವ ಅಂಗಡಿಯ ಪಕ್ಕದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಪಹಾದ್​ ನಡುವೆ ಮಂಗಳವಾರ ಸಂಜೆ ಗಲಾಟೆ ನಡೆದಿದ್ದು, ಈ ಸಮಯದಲ್ಲಿ ನನ್ನ ಮಗ ಅರ್ಬಾಜ್​ನನ್ನು ಪಹಾದ್​ ಕತ್ತರಿಯಿಂದ ಕುತ್ತಿಗೆಯ ಭಾಗಕ್ಕೆ ಚುಚ್ಚಿದ್ದು ತೀವ್ರ ಗಾಯವಾಗಿದೆ.ನಂತರ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕರೆದುಕೊಂಡು ಹೋಗಿ ದಾಖಲು ಮಾಡುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net