ಹಾರೋಹಳ್ಳಿ: ಮದ್ಯಪಾನ ಮಾಡಲು ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಕಗ್ಗಲಿಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಡೇರಹಳ್ಳಿಯ ಪುನೀತ್ (30), ಮಹೇಶ್ ಕುಮಾರ್(30), ಮೋಹನ್ ಕುಮಾರ್ (32) ಬಂಧಿತರು.
ಘಟನೆಯ ಹಿನ್ನೆಲೆ : ವಡೇರಹಳ್ಳಿಯಲ್ಲಿ ಆರೋಪಿಗಳು ಮದ್ಯಪಾನ ಮಾಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಅದೇ ತೋಟದಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ನಾಗರಾಜು ಎನ್ನುವವರು ತಡೆದು ಇಲ್ಲಿ ಮದ್ಯಪಾನ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಆದರೆ ಅದನ್ನು ಲೆಕ್ಕಿಸದೆ ಕ್ರಿಕೆಟ್ ವಿಕೆಟ್‌ಗಳಿಂದ ಥಳಿಸಿದ್ದು, ಈ ಪರಿಣಾಮ ನಾಗರಾಜು ಮೃತಪಟ್ಟಿದ್ದರು. ಈ ಬಗ್ಗೆ ನಾಗರಾಜು ಪುತ್ರ ಕಗ್ಗಲಿಪುರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ವೆಂಕಟೇಶ್ ನೇತೃತ್ವದ ತಂಡ ಮೂವರ ಬಂಧಿಸಿದೆ.