ಕಳವಿಗೆ ಹೊಂಚು ಹಾಕಿದ್ದವನ ಬಂಧನ

Published on

ಚಿಂತಾಮಣಿ: ನಗರದ ಎನ್​.ಆರ್​.ಬಡಾವಣೆಯ ಕೆಇಬಿ ಕಚೇರಿಯ ಕಾಂಪೌಂಡ್​ ಬಳಿ ಅನುಮಾನಾಸ್ಪದವಾಗಿ ಅಡಗಿ ಕುಳಿತಿದ್ದ ವ್ಯಕ್ತಿಯನ್ನು ಗಸ್ತಿನಲ್ಲಿದ್ದ ಪೊಲೀಸ್​ ಪೇದೆಗಳಾದ ಲೋಕೇಶ್​ ಮತ್ತು ಶ್ರೀನಿವಾಸಮೂರ್ತಿ ವಶಕ್ಕೆ ಪಡೆದಿದ್ದಾರೆ. ನಗರದ ಬೆಂಗಳೂರು ಜೋಡಿ ರಸ್ತೆಯ ಕನ್ನಂಪಲ್ಲಿ ನಿವಾಸಿ ಗಂಗರಾಜು (23) ಆರೋಪಿ. ಕಬ್ಬಿಣದ ಕಂಬಿಯೊಂದನ್ನು ಇಟ್ಟುಕೊಂಡು ಕಳವು ಮಾಡಲು ಹೊಂಚು ಹಾಕಿದ್ದಾಗಿ ವಿಚಾರಣೆಯ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ. ಚಿಂತಾಮಣಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net