ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ

26mnd1.. photo
Published on

ಹಳಿಯಾಳ: ತಾಲೂಕು ಮತ್ತು ಹುಬ್ಬಳ್ಳಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಳೇ ಹುಬ್ಬಳ್ಳಿಯ ಅಕ್ಕಿಪೇಟೆಯ ನಿವಾಸಿ ಜುಬೇರಖಾನ್ ಅಸ್ಲಂಖಾನ್ ಪಠಾಣ (25), ಹಳಿಯಾಳ ತಾಲೂಕಿನ ಹೊಸ ಹಡಗಲಿ ಗ್ರಾಮದ ದುರಗಪ್ಪ ಹೆಳವರ ಮತ್ತು ಹಳಿಯಾಳದ ಚವ್ಹಾಣ ಪ್ಲಾಟನ ಸಮೀರುಲ್ಲಾ ಸೋಹೆಲ್ ಬೇಪಾರಿ ಬಂಧಿತರು. ಈ ಮೂವರು ಹಳಿಯಾಳ ಮತ್ತು ಹುಬ್ಬಳ್ಳಿಯಲ್ಲಿ ಬೈಕ್ ಕಳ್ಳತನ ಮಾಡಿದ್ದಾರೆ. ಇವರೊಂದಿಗೆ ಮತ್ತೊಬ್ಬನಿದ್ದು, ಆತಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಜಾಲ ಬೀಸಲಾಗಿದೆ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
್ಞ ಮುಂಡಗೋಡ: ಅಂತರ ಜಿಲ್ಲಾ ಬೈಕ್ ಕಳ್ಳನನ್ನು ಪೊಲೀಸರು ಬಂಧಿಸಿ ಆತನಿಂದ ಬೈಕ್ ವಶಪಡಿಸಿಕೊಂಡ ಘಟನೆ ಮಂಗಳವಾರ ಜರುಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಲಗನಕೊಪ್ಪ ಗ್ರಾಮದ ಅನಿಲ ಶಿವಪ್ಪ ಭೋವಿ ವಡ್ಡರ ಬಂಧಿತ ಆರೋಪಿ.
2021ರ ಜೂನ್ 5ರಂದು ಕಾತೂರ ಗ್ರಾಮದ ಸಿರಾಜ್ ಬೊಮ್ಮನಳ್ಳಿ ಎಂಬುವರ ಮನೆ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ ಮಾಡಿ ನಾಪತ್ತೆಯಾಗಿದಕ. ಅಲ್ಲದೆ, ಬೈಕ್ ನೋಂದಣಿ ಸಂಖ್ಯೆ ಬದಲಿಸಿ ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ಮನೆ ಕಳ್ಳತನಕ್ಕೂ ಇದೇ ಬೈಕ್ ಬಳಸುತ್ತಿದ್ದ. ಇವನ ಮೇಲೆ 40ಕ್ಕೂ ಹೆಚ್ಚು ಮನೆ ಕಳವು ಹಾಗೂ ಮೊಬೈಲ್​ಫೋನ್ ಕಳ್ಳತನದಂತಹ ವಿವಿಧ ಪ್ರಕರಣಗಳಲ್ಲಿ ಸೊಲ್ಲಾಪುರ, ಪೂನಾ, ಕೊಲ್ಲಾಪುರ ಸೇರಿ ಹಲವು ಕಡೆಗಳಲ್ಲಿ ಭಾಗಿಯಾಗಿದ್ದಾನೆ. ಈ ಮೊದಲು ಸೊಲ್ಲಾಪುರದಲ್ಲಿ ಕಳ್ಳತನ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದ. ಖಚಿತ ಮಾಹಿತಿ ಮೇರೆಗೆ ಮುಂಡಗೋಡ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್, ಹೆಚ್ಚುವರಿ ಎಸ್ಪಿ ಎಸ್. ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ, ಸಿಪಿಐ ಸಿದ್ದಪ್ಪ ಸಿಮಾನಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net