ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪಿಗಳ ಬಂಧನ

ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪಿಗಳ ಬಂಧನ
Published on

ಹನೂರು: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಕುಂಟಮುನಿ ಕೆರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ ಇಬ್ಬರು ಆರೋಪಿಗಳನ್ನು ಸೋಮವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ತಾಲೂಕಿನ ಬೋರೆದೊಡ್ಡಿ ಗ್ರಾಮದ ಸಿದ್ದುನಾಯ್ಕ ಹಾಗೂ ಮಾದೇಶ ಬಂಧಿತರು. ಈ ಇಬ್ಬರು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ವಲಯದ ಪಚ್ಚೆದೊಡ್ಡಿ ಶಾಖೆಯ ದಿನ್ನಳ್ಳಿ ಗಸ್ತಿನ ಕುಂಟಮುನಿ ಕೆರೆ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೆಂಕಿ ಹಚ್ಚಿ ವಾಪಸ್ಸಾಗುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಸಿಬ್ಬಂದಿ ಈ ಬಗ್ಗೆ ತಿಳಿದು ಅಧಿಕಾರಿಗಳ ಗಮನಕ್ಕೆ ತಂದರು. ಡಿಸಿಎಫ್ ಪರಮೇಶ್, ಎಸಿಎಫ್ ಸ್ವಪ್ನಿಲ್ ಮನೋಹರ್ ಆಹಿರೆ ಹಾಗೂ ಆರ್‌ಎಫ್‌ಒ ಪಿ.ಈ. ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಡಿಆರ್‌ಎಫ್‌ಒ ವಿನಾಯಕ ಬೋರಡ್ಡಿ ಹಾಗೂ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಗಸ್ತು ಅರಣ್ಯ ಪಾಲಕ ಭಿಮಶಿ ಮುನ್ಯಾಳ್, ಅಶೋಕ್ ಎಸ್. ಕೂಗುವರ್, ಪಿ. ಸುರೇಶ್ ಹಾಗೂ ಸಿಬ್ಬಂದಿ ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net