ಜೂಜಾಟದಲ್ಲಿ ತೊಡಗಿದ್ದವನ ಬಂಧನ

3bkl5- BIKE SIEZE
Published on

ಭಟ್ಕಳ: ತಾಲೂಕಿನ ಮುರ್ಡೆಶ್ವರದ ಬೈಲೂರಿನ ಕ್ರಾಸ್ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಎಲೆಗಳ ಅಂದರ- ಬಾಹರ ಜೂಜಾಟದಲ್ಲಿ ತೊಡಗಿದ್ದ ಮೂವರಲ್ಲಿ ಒಬ್ಬನನ್ನು ವಶಕ್ಕೆ ಪಡೆದು, ಇನ್ನಿಬ್ಬರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಜಟ್ಟಪ್ಪ ಸುಬ್ಬಯ್ಯ ನಾಯ್ಕ ಬಂಧಿತ ಆರೋಪಿ. ದೊಡ್ಡ ಬಲ್ಸೆಯ ವಸಂತ ಹರಿಕಾಂತ, ಕಂಡಕ ನಿವಾಸಿ ದುರ್ಗಯ್ಯ ಪರಾರಿಯಾಗಿದ್ದಾರೆ. ಇವರು ತಾಲೂಕಿನ ಬೈಲೂರಿನ ಕ್ರಾಸ್ ಅರಣ್ಯ ಪ್ರದೇಶದಲ್ಲಿ ಅಂದರ-ಬಾಹರ ಜೂಜಾಟದಲ್ಲಿ ನಿರತರಾಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮುರ್ಡೆಶ್ವರ ಪಿಎಸ್​ಐ ಹಣಮಂತ ಬಿರಾದಾರ ಸ್ಥಳದಲ್ಲಿ ಸಿಕ್ಕಿಬಿದ್ದ ಜಟ್ಟಪ್ಪ ನಾಯ್ಕ, ಇಸ್ಪೀಟ್ ಎಲೆ, ಮೂರು ಬೈಕ್ ಸೇರಿ 3500 ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ. ಮುರ್ಡೆಶ್ವರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net