ಯುವಕನನ್ನು ಬೆದರಿಸಿ ಮೊಬೈಲ್ ಕಿತ್ತುಕೊಂಡವರ ಬಂಧನ

Arrest
Arrest
Published on

ಚನ್ನಪಟ್ಟಣ: ಡ್ರಾಪ್ ಕೊಡುವ ನೆಪದಲ್ಲಿ ಯುವಕನನ್ನು ಬೆದರಿಸಿ ಮೊಬೈಲ್ ಕಿತ್ತುಕೊಂಡಿದ್ದವರನ್ನು ಚನ್ನಪಟ್ಟಣ ಗ್ರಾವಾಂತರ ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಆಟೋರಿಕ್ಷಾ ಹಾಗೂ ಮೊಬೈಲ್‌ಅನ್ನು ವಶಕ್ಕೆ ಪಡೆದಿದ್ದಾರೆ.

ಮಂಡ್ಯದ ಗುತ್ತಲ ನಿವಾಸಿಗಳಾದ ಮಂಜುನಾಥ್ ಹಾಗೂ ಮುತ್ತುರಾಜ್ ಬಂಧಿತರು. ಬಿಡದಿಯಿಂದ ಮಂಡ್ಯಗೆ ಹೋಗಲು ರಸ್ತೆ ಬದಿ ನಿಂತಿದ್ದ ಮಂಡ್ಯದ ಅಭಿಜಿತ್ ಎಂಬ ಯುವಕನನ್ನು ಡ್ರಾಪ್ ವಾಡುತ್ತೇವೆ ಎಂದು ಆಟೋಗೆ ಹತ್ತಿಸಿಕೊಂಡಿದ್ದ ಇಬ್ಬರು ಅಪರಿಚಿತರು, ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡ್ಯ ಹತ್ತಿರದ ಎಕ್ಸ್‌ಪ್ರೆಸ್ ವೇ ಪಕ್ಕದಲ್ಲಿ ಅಭಿಜಿತ್‌ನನ್ನು ಬೆದರಿಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂ‘ ಅಭಿಜಿತ್ ಚನ್ನಪಟ್ಟಣ ಗ್ರಾವಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಹಿನ್ನೆಲೆ, ವೃತ್ತ ನಿರೀಕ್ಷಕ ಬಿ.ಕೆ ಪ್ರಕಾಶ್, ಪಿಎಸ್‌ಐ ಮನೋಹರ್, ಪ್ರೊಬೆಷನರಿ ಪಿಎಸ್‌ಐ ಅಜಯ್ ಗೌಡ ತಂಡ ತನಿಖೆಕೈಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net