

ಚನ್ನಪಟ್ಟಣ: ಪೆಟ್ರೋಲ್ ಬಂಕ್ ನೌಕರನನ್ನು ಬೆದರಿಸಿ, ಹಣ ದೋಚಿದ್ದ ಆರೋಪಿಗಳನ್ನು ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಹಮದ್ ಸೂಪ್ತಿಯನ್, ಉಮ್ರಾಜ್ ಪಾಷ, ಮಹಮ್ಮದ್ ಅಪ್ರಾನ್, ಸಯ್ಯದ್ ಶೋಹೆಬ್ ಬಂಧಿತರು.
ಏನಿದು ಪ್ರಕರಣ?: ನಗರದ ಬಿ. ಎಂ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ಗೆ ನ.7ರ ಬೆಳಗ್ಗಿನ ಜಾವ ಕಾರಿನಲ್ಲಿ ಬಂದ ಆರೋಪಿಗಳು ಸ್ಕ್ಯಾನ್ ಮಾಡುತ್ತೇವೆ, 5 ಸಾವಿರ ರೂ. ನೀಡುವಂತೆ ಬಂಕ್ ನೌಕರರನ್ನು ಪುಸಲಾಯಿಸಿದ್ದಾರೆ. ಸ್ಕ್ಯಾನ್ ಮಾಡುವಂತೆ ನಾಟಕ ಮಾಡಿ ಉದ್ಯೋಗಿಯ ಬಳಿಯಿದ್ದ 22 ಸಾವಿರ ರೂ.ವನ್ನು ಕಿತ್ತುಕೊಂಡಿದ್ದಾರೆ.
ವಿರೋಧಿಸಿದಾಗ ಚಾಕುವಿನಿಂದ ಬೆನ್ನಿಗೆ ಇರಿದು ಪರಾರಿಯಾಗಿದ್ದರು. ಈ ಕುರಿತು ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರ ಸಿಪಿಐ ರವಿಕಿರಣ್ ನೇತೃತ್ವದಲ್ಲಿ ತಂಡ ಪ್ರಕರಣ ಭೇದಿಸಿದ್ದು, ಬೆಂಗಳೂರಿನ ಲಕ್ಕಸಂದ್ರದಲ್ಲಿ ನಾಲ್ವರು ಆರೋಪಿಗಳನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರು, ಆಯುಧ ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಎಲ್ಲ ಆರೋಪಿಗಳನ್ನು ಜಿಲ್ಲಾ ಕಾರಾಗೃಹಕ್ಕೆ ಬಿಡಲಾಗಿದೆ.