ಉಪ್ಪಾರಹಳ್ಳಿಗೆ ಮೊಬೈಲ್ ಟವರ್ ವ್ಯವಸ್ಥೆ ಕಲ್ಪಿಸಿ

Untitled design
ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಗ್ರಾಮಸ್ಥರು ಬಿಎಸ್‌ಎನ್‌ಎಲ್ ಉಪವಿಭಾಗೀಯ ಇಂಜಿನಿಯರ್ ನಾಗೇಂದ್ರಗೆ ಮನವಿ ಸಲ್ಲಿಸಿದರು. ಗ್ರಾಪಂ ಸದಸ್ಯ ಎಚ್.ಕುಮಾರಸ್ವಾಮಿ, ಗ್ರಾಮಸ್ಥರಾದ ನೇಣ್ಕಿ ಗಿರೀಶ್, ಗಂಗಾಧರ, ಮಲ್ಲಿಕಾರ್ಜುನ ಇದ್ದರು.
Published on

ಕಂಪ್ಲಿ: ತಾಲೂಕಿನ ಉಪ್ಪಾರಹಳ್ಳಿ ಗ್ರಾಮಕ್ಕೆ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಸೌಲಭ್ಯ ಒದಗಿಸಬೇಕು ಎಂದು ಮೆಟ್ರಿ ಗ್ರಾಪಂ ಸದಸ್ಯ ಎಚ್.ಕುಮಾರಸ್ವಾಮಿ ಹೇಳಿದರು.


ಹೊಸಪೇಟೆಯ ಬಿಎಸ್‌ಎನ್‌ಎಲ್ ಉಪವಿಭಾಗೀಯ ಇಂಜಿನಿಯರ್ ನಾಗೇಂದ್ರಗೆ ಮನವಿ ಸಲ್ಲಿಸಿ ಮಾತನಾಡಿದರು.

ಉಪ್ಪಾರಹಳ್ಳಿ ಗ್ರಾಮಕ್ಕೆ ಟವರ್ ಸೌಲಭ್ಯ ಇಲ್ಲದಿದ್ದರಿಂದ ಗ್ರಾಮಸ್ಥರು ಮೊಬೈಲ್ ಆಧಾರಿತ ಸೇವೆಗಳಿಂದ ವಂಚಿತರಾಗಿದ್ದಾರೆ. ಸರ್ಕಾರದ ಯೋಜನೆ, ತುರ್ತು ಸಂಪರ್ಕ, ಬ್ಯಾಂಕಿನ ಸಂದೇಶಗಳು ತಲುಪುತ್ತಿಲ್ಲ. ಶಾಲಾ ಮಕ್ಕಳ ಆನ್‌ಲೈನ್ ಪಾಠ ಬೋಧನೆಗೆ ಅಡಚಣೆಯಾಗಿದೆ.

ಗರ್ಭಿಣಿಯರ ಹೆರಿಗೆ ಸಂದರ್ಭದಲ್ಲಿ 108 ಕರೆ ಮಾಡಲು ಸಮಸ್ಯೆಯಾಗುತ್ತಿದೆ. ಮೊಬೈಲ್ ಟವರ್ ಹಾಕಿಕೊಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಮೊಬೈಲ್ ಟವರ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು. ಗ್ರಾಮಸ್ಥರಾದ ನೇಣ್ಕಿ ಗಿರೀಶ್, ಗಂಗಾಧರ, ಮಲ್ಲಿಕಾರ್ಜುನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net