ವಿಭಾಗವಾರು ವಿಜೇತರಲ್ಲದೆ, ತೀರ್ಪುಗಾರ ಮಂಡಳಿಯು ವಿನೂತನ ಸಾಧನೆ ಮೆರೆದ ತಂಡಗಳಿಗೆ ತಲಾ 10 ಲಕ್ಷ ರೂ. ನಗದು ಬಹುಮಾನವುಳ್ಳ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಿದೆ. 'ಸ್ವಾಸ' ಸಾಧನ ಕಂಡುಹಿಡಿದ ಹೈದರಾಬಾದ್ನ ನಾರಾಯಣ ರಾವ್ ಶ್ರೀಪಾದ, ಮನಮೋಹನ್ ಜೈನ್ ಮತ್ತು ವೆಂಕಟ್ ಯೆಚೂರಿ ತಂಡ; "ಸಿಕಲ್ ಸರ್ಟ್' ಸಿಕಲ್-ಸೆಲ್ ಅನಿಮಿಯಾ ಪರೀಕ್ಷೆ ಹಾಗೂ ಚಿಕಿತ್ಸೆಯಲ್ಲಿ ಬಳಸಲಾಗುವ ಸಾಧನ ಅನ್ವೇಷಿಸಿದ ಬೆಂಗಳೂರಿನ ಪೊ.ಸಾಯಿ ಶಿವ ಗೋರ್ತಿ, ಅರುಣ್ ಬಾಲಸುಬ್ರಮಣ್ಯನ್, ರಾಜೇಶ್ ಶ್ರೀನಿವಾಸ್ ಮತ್ತು ಯತೀಶ್ ಪ್ರಸಾಸ್ ದಾಸರಿ ತಂಡ; ಪೋರ್ಟಿಯಾ ಎಂಬ ಆಕ್ಸಿಜನ್ ಜನರೇಟರ್ ಕಂಡುಹಿಡಿದ ಬೆಂಗಳೂರಿನ ಜಾನ್ ಜಾಯ್ ಮತ್ತು ಸಂಜಯ್ ಕೆ.ಪಿಳ್ಳೆ ಅವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. "ಎಮ್ವೋಲಿಯೋ' ಎಂಬ ಬ್ಯಾಟರಿ ಚಾಲಿತ ರೆಫ್ರಿಜರೇಟರ್ ಸಾಧನದ ಅನ್ವೇಷಿಸಿದ ಮಣಿಪಾಲದ ಮಯೂರು ಯು. ಶೆಟ್ಟಿ ಹಾಗೂ "ಮೋಧ ಪೆಡಲ್ ಆಪರೇಟಿಂಗ್ ಮಷಿನ್' ಕಂಡುಹಿಡಿದ ಹೈದರಾಬಾದ್ನ ಶಿವಕುಮಾರ್ ಮೋಧ ಇನ್ಫೋಸಿಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.