ಶಾಸಕ, ಪೊಲೀಸರ ನಡುವೆ ವಾಗ್ವಾದ

ಶಾಸಕ, ಪೊಲೀಸರ ನಡುವೆ ವಾಗ್ವಾದ
Published on

ಹಾಸನ: ಇಲ್ಲಿನ ಹೇಮಾವತಿ ನಗರದಲ್ಲಿ ಪ್ರತಿಷ್ಠಾಪಿಸಿದ್ದ 20 ಅಡಿ ಎತ್ತರದ ಮಹಾರಾಜ್ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ವಿಚಾರವಾಗಿ ಶಾಸಕ ಎಚ್.ಪಿ.ಸ್ವರೂಪ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಗುರುವಾರ ರಾತ್ರಿ ನಗರದ ಪ್ರಮುಖ ವೃತ್ತಗಳಲ್ಲಿ ಸಾಗುತ್ತಿದ್ದ ಮೆರವಣಿಗೆಯ ವೇಳೆ ಮಹಾವೀರ್ ವೃತ್ತದಲ್ಲಿ ಡಿಜೆ ಸೌಂಡನ್ನು ಡಿವೈಎಸ್‌ಪಿ ಮುರಳೀಧರ್ ಹಾಗೂ ಸಿಪಿಐ ಮೋಹನ್‌ಕೃಷ್ಣ ತಾತ್ಕಾಲಿಕವಾಗಿ ಆಫ್ ಮಾಡಿಸಿದರು. ಇದರಿಂದ ಯುವಕ-ಯುವತಿಯರು ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಶಾಸಕ ಎಚ್.ಪಿ.ಸ್ವರೂಪ್, ಎಲ್ಲರಿಗೂ ಒಂದೇ ನಿಯಮ ಇರಬೇಕು. ಒಬ್ಬರಿಗೊಂದು, ಮತ್ತೊಬ್ಬರಿಗೊಂದು ನಿಯಮ ಬೇಡ ಎಂದು ಪೊಲೀಸರ ಕ್ರಮದ ವಿರುದ್ಧ ಕಿಡಿಕಾರಿದರು. ತಕ್ಷಣ ಡಿಜೆ ಸೌಂಡ್ ಪುನಾ ಆನ್ ಮಾಡುವಂತೆ ಸೂಚನೆ ನೀಡಿದರು.

ಪೊಲೀಸರೊಂದಿಗೆ ಶಾಸಕರ ವಾಗ್ವಾದವೂ ನಡೆಯಿತು. ಶಾಸಕರ ಒತ್ತಾಯಕ್ಕೆ ಪೊಲೀಸರು ಮತ್ತೆ ಡಿಜೆ ಆನ್ ಮಾಡಿದರು. ನಂತರ ಭಕ್ತರು ಉತ್ಸಾಹಭರಿತವಾಗಿ ಕುಣಿದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net