ಅಡಕೆ ಕದ್ದ ಆರು ಜನ ಅಂದರ್‌

Aaaaaaaaaa
Published on

ಯಲ್ಲಾಪುರ:  ಪಟ್ಟಣದ ಸವಣಗೇರಿಯ ದುರ್ಗಾಂಬಾ ಸೇಲ್ಸ್ ವಕಾರಿಯಿಂದ ಅಡಕೆ ಕದ್ದ 6 ಜನರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. 

    ಕುಮಟಾ ತಾಲೂಕಿನ ಮಾಸೂರಿನ ಮಹೇಶ ಈರಾ ಗೌಡ, ಯಲ್ಲಾಪುರದ ಇಸ್ಲಾಂ ಗಲ್ಲಿಯ ಸರ್ಫ್ರಾಜ ಅಬ್ದುಲ್ ಸಾಬ ಬಡಗಿ, ಉದ್ಯಮನಗರದ ಪರಶುರಾಮ ಬಾಬು ಕಾಂಬಳೆ, ಕುಮಟಾ ತಾಲೂಕಿನ ಹೊಸ್ಕೇರಿಯ ಶಶಿಧರ ಲಿಂಗಪ್ಪ ಪಟಗಾರ, ಹರೀಶ ಮಾರಪ್ಪ ಪಟಗಾರ, ನವೀನ ಶ್ರೀಪಾದ ಪಟಗಾರ ಬಂಧಿತರು.

    ಇವರು ಕಳೆದ ಮಾ.13 ರಂದು ರಾತ್ರಿ ಸವಣಗೇರಿಯ ದುರ್ಗಾಂಬಾ ಸೇಲ್ಸ್ ವಕಾರಿಯ ಮೇಲ್ಛಾವಣಿಯನ್ನು ತೆಗೆದು ಒಳನುಗ್ಗಿ 4 ಕ್ವಿಂಟಾಲ್ ಚಾಲಿ ಅಡಕೆ ಹಾಗೂ 80 ಕೆ.ಜಿ ಕೆಂಪು ಅಡಕೆ ಸೇರಿ ಒಟ್ಟು 1.45 ಲಕ್ಷ ರೂ ಮೌಲ್ಯದ ಅಡಕೆ ಕಳವು ಮಾಡಿದ್ದರು. ಈ ಕುರಿತು ವಕಾರಿಯ ಮಾಲೀಕ ಗಣೇಶ ಭಟ್ಟ ದೂರು ನೀಡಿದ್ದರು. 

   ಪ್ರಕರಣ ದಾಖಲಿಸಿಕೊಂಡ ಪೊಲೀಸರು 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಕಳ್ಳತನ ಮಾಡಿದ 4 ಕ್ವಿಂಟಾಲ್ ಅಡಕೆ, ಕೃತ್ಯಕ್ಕೆ ಬಳಸಿದ ಆಟೊರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

    ಎಸ್.ಪಿ ವಿಷ್ಣುವರ್ಧನ್, ಎಎಸ್.ಪಿ ಜಯಕುಮಾರ, ಡಿವೈಎಸ್ಪಿ ಗಣೇಶ.ಕೆ.ಎಲ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ ನೀಲಮ್ಮನವರ್, ಪಿಎಸ್ಐಗಳಾದ ರವಿ ಗುಡ್ಡಿ, ಸುನೀಲ ಹುಲ್ಲೊಳ್ಳಿ, ಮಂಜುನಾಥ ಪಾಟೀಲ, ಲತಾ ಕೆ.ಎನ್., ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ, ಬಸವರಾಜ.ಡಿ.ಕೆ, ಗಿರೀಶ ಲಮಾಣಿ, ಪರಶುರಾಮ ಕಾಳೆ, ಚಿದಂಬರ ಅಂಗಡಿ, ಕೃಷ್ಣ ಮಾತ್ರೋಜಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net