

ಸುಳ್ಯ: ಗಡಿನಾಡ ಉತ್ಸವದ ಮುಖಾಂತರ ಅರೆಭಾಷಾ ಸಂಸ್ಕೃತಿಯ ಉದ್ದೀಪನದ ಜತೆಗೆ ಸಮುದಾಯದ ನಡುವೆ ಬಾಂಧವ್ಯವೂ ವೃದ್ಧಿಸುತ್ತದೆ ಎಂದು ಲಯನ್ಸ್ ಕ್ಲಬ್‌ನ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಹೇಳಿದರು.
ಅರೆಭಾಷೆ ಅಕಾಡೆಮಿ ವತಿಯಿಂದ ಭಾನುವಾರ ಮಂಡೆಕೋಲಿನಲ್ಲಿ ನಡೆದ ಅರೆಭಾಷಾ ಗಡಿನಾಡ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಪಿ.ಸಿ ಜಯರಾಮ್, ಲಕ್ಷ್ಮೀನಾರಾಯಣ ಕಜೆಗದ್ದೆ, ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ದ.ಕ. ಜಿಲ್ಲಾ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಅಕಾಡೆಮಿ ಸದಸ್ಯರಾದ ಚಂದ್ರಶೇಖರ್ ಪೇರಾಲು, ಚಂದ್ರಾವತಿ ಬಡ್ಡಡ್ಕ, ಲತಾ ಕುದ್ಪಾಜೆ, ಗ್ರಾಮ ಗೌಡ ಸಮಿತಿಯ ಮಹಿಳಾ ಅಧ್ಯಕ್ಷೆ ದಿವ್ಯಲತಾ ಚೌಟಾಜೆ ಮೊದಲಾದವರು ಭಾಗವಹಿಸಿದ್ದರು. ಅಕಾಡೆಮಿ ಸದಸ್ಯ ಜ್ಞ್ಞಾನೇಶ್ ಎನ್.ಎ. ಸ್ವಾಗತಿಸಿದರು.
ಲೇಖಕಿ ಲಲಿತಾ ಮಲ್ಲಾರ ಅವರ ಕಾದಂಬರಿ ‘ಕೋಟಿ ತೀರ್ಥ’ ಬಿಡುಗಡೆಗೊಂಡಿತು. ಸಾಧಕರಾದ ಲಕ್ಷ್ಮೀ ವಿ.ಪಡ್ಪು, ತ್ಯಾಂಪಣ್ಣ ಗೌಡ ದಂಪತಿ, ಎಲ್ಯಣ್ಣ ಗೌಡ ಕಾಯರ್ತೋಡಿ, ಲಕ್ಷ್ಮಣ ಗೌಡ ಕುಕ್ಕೆಟ್ಟಿ, ಬಾಲಣ್ಣ ಮಾಸ್ಟರ್ ಕುಕ್ಕುಡೇಲು ಹಾಗೂ ಬಾಲಕೃಷ್ಣ ದಂಪತಿಗಳನ್ನು ಸನ್ಮಾನಿಸಲಾಯಿತು. ಗ್ರಾಮ ಗೌಡ ಸಮಿತಿ ಅಧ್ಯಕ್ಷ ಶಿವಪ್ರಸಾದ್ ವಂದಿಸಿದರು. ಜಯರಾಜ್ ಕುಕ್ಕೆಟ್ಟಿ ಕಾರ್ಯಕ್ರಮ ನಿರೂಪಿಸಿದರು.