ಪ್ರತಿಭಟನೆಗೆ ಪುತ್ತೂರಿನಿಂದ ೧೫೦೦ ಮಂದಿ – ವಿಹಿಂಪ ಪುತ್ತೂರು ಜಿಲ್ಲೆ ಅಧ್ಯಕ್ಷ ಕೃಷ್ಣ ಪ್ರಸನ್ನ ಮಾಹಿತಿ

ಪುತ್ತೂರು: ಬಾಂಗ್ಲಾದೇಶದಲ್ಲಿ ಹಿಂದುಗಳನ್ನು ಗುರಿಯಾಗಿಸಿಕೊಂಡು ಇಸ್ಲಾಂ ಮೂಲಭೂತವಾದಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಹೆಣ್ಣು ಮಕ್ಕಳ ಮಾನಹರಣ ಮಾಡುವ ಜತೆಗೆ ಹಿಂದುಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿಯಿಂದ ಡಿ.೪ರಂದು ಬೆಳಗ್ಗೆ ೧೦ಕ್ಕೆ ಮಂಗಳೂರು ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಇದಕ್ಕೆ ವಿಶ್ವಹಿಂದು ಪರಿಷತ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ವಿಶ್ವ ಹಿಂದು ಪರಿಷತ್ ಪುತ್ತೂರು ಜಿಲ್ಲೆ ಅಧ್ಯಕ್ಷ ಫಿಸಿಯೋಥೆರಪಿಸ್ಟ್ ಕೃಷ್ಣ ಪ್ರಸನ್ನ ಹೇಳಿದರು.

ಅಲ್ಲಿನ ಸರ್ಕಾರ ದಂಗೆಕೋರರನ್ನು ರಕ್ಷಿಸುತ್ತಿದೆ. ಸಂಕಷ್ಟದಲ್ಲಿದ್ದ ಸಂದರ್ಭ ಅನ್ನ ಆಹಾರ ನೀಡಿದ ಇಸ್ಕಾನ್‌ನವರ ಮೇಲೆ ಅನಾಗರಿಕವಾಗಿ ವರ್ತಿಸಲಾಗಿದೆ. ಸ್ವಾಮೀಜಿಯವರನ್ನು ಸುಳ್ಳು ಆರೋಪ ಹಾಕಿ ಬಂಽಸಲಾಗಿದೆ. ಹಿಂದುಗಳು ಅಭದ್ರತೆಯನ್ನು ಎದುರಿಸುತ್ತಿದ್ದು, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದುಗಳ ಜತೆಗೆ ಸಂಘಟನೆ ನಿರಂತರವಾಗಿದೆ. ಪ್ರತಿಭಟನಾ ಸಭೆಗೆ ಪುತ್ತೂರಿನಿಂದ ೧೫೦೦ ಮಂದಿ ಹೋಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಬೈಪಾಸ್‌ನ ತೆಂಕಿಲದಲ್ಲಿ ಬೆಳಗ್ಗೆ ೭.೩೦ಕ್ಕೆ ಹೊರಡಲಾಗುವುದು ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಕೋಶಾಽಕಾರಿ ಮಾಧವ ಪೂಜಾರಿ, ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ್ ತೆಂಕಿಲ, ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲ್, ನಗರ ಅಧ್ಯಕ್ಷ ದಾಮೋಧರ ಪಾಟಾಳಿ ಉಪಸ್ಥಿತರಿದ್ದರು.

 

Share This Article

ಚಳಿಗಾಲದಲ್ಲಿ ಅಲೋವೆರಾ ಜೆಲ್ ಅನ್ನು ತಲೆಗೆ ಹಚ್ಚಿಕೊಳ್ಳಬಹುದೇ? aloe vera gel benefits

aloe vera gel benefits : ಚಳಿಗಾಲದಲ್ಲಿ ತಲೆಹೊಟ್ಟು ಸಾಮಾನ್ಯ. ಚಳಿಗಾಲದಲ್ಲಿ ಶುಷ್ಕ ಗಾಳಿಯು ನಮ್ಮ…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ಏನಾಗುತ್ತೆ ಗೊತ್ತಾ? Coconut Oil Benefits

Coconut Oil Benefits:  ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.…

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…