ಸಂಕೋಡನಹಳ್ಳಿ ಗ್ರಾಮದಲ್ಲಿ ಆರತಿ ಬಾನ

01arsph2ep
??????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಅರಸೀಕೆರೆ: ತಾಲೂಕಿನ ಸಂಕೋಡನಹಳ್ಳಿ ಗ್ರಾಮದಲ್ಲಿ ಆರತಿ ಬಾನ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಭಾನುವಾರ ತಡರಾತ್ರಿ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ, ಶ್ರೀ ರಂಗನಾಥ ಸ್ವಾಮಿ, ಹೊಂಗ್ಯಮ್ಮ, ಮಲ್ಲಿಗೆಮ್ಮ, ಚಲುವರಾಯ, ಧೂತರಾಯ, ಕೆಂಚಪ್ಪಸ್ವಾಮಿ ಉತ್ಸವ ಜರುಗಿತು.


ಚಲುವರಾಯ ಹಾಗೂ ಧೂತರಾಯ ಸ್ವಾಮಿ ಕುಣಿತ ನೋಡಗರ ಮನಸೂರೆಗೊಂಡಿತು. ಯಾದಾಪುರ, ಮಲ್ಲೇನಹಳ್ಳಿ, ಭೈರಾಂಬುಧಿ, ಚಿಕ್ಕೂರು, ಕಲ್ಲನಾಯ್ಕನಹಳ್ಳಿ, ಕಾಟೀಕೆರೆ, ಕಾಳನಕೊಪ್ಪಲು, ಮುದ್ದರಂಗನಹಳ್ಳಿ, ಜವನಹಳ್ಳಿ, ಜಾಜೂರು ಸೇರಿದಂತೆ ಹಲವು ಗ್ರಾಮಗಳಿಂದ ಜನರು ಆಗಮಿಸಿದ್ದರು. ಗ್ರಾಮಸ್ಥರಿಂದ ಪ್ರಸಾದ ವಿನಿಯೋಗ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net