

ಗಜೇಂದ್ರಗಡ: ಡಿ. ದೇವರಾಜ ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ಭೂರಹಿತರಿಗೆ 7 ಲಕ್ಷ ಹೆಕ್ಟೇರ್ ಭೂ ಒಡೆತನ ನೀಡುವ ಮೂಲಕ ಇಂದಿಗೂ ಜನ ಮಾನಸದಲ್ಲಿ ಸ್ಮರಣೀಯರಾಗಿದ್ದಾರೆ ಎಂದು ತಾ.ಪಂ. ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಹೇಳಿದರು.
ಪಟ್ಟಣದ ತಾ. ಪಂ ಕಚೇರಿಯಲ್ಲಿ ಭಾನುವಾರ ಡಿ. ದೇವರಾಜ ಅರಸು ಅವರು ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು.
ಇಂದಿರಾ ಗಾಂಧಿಯವರ ಆಡಳಿತಾವಧಿಯಲ್ಲಿ 20 ಅಂಶಗಳ ಕಾರ್ಯಕ್ರಮವನ್ನು ಯಥಾವತ್ತಾಗಿ ಜಾರಿಗೆ ತಂದ ಹಾಗೂ ಬಡವರಿಗೆ ಭೂ ಒಡೆತನ ನೀಡಿದ ವಿಶ್ವದ ಏಕೈಕ ಮುಖ್ಯಮಂತ್ರಿ ದೇವರಾಜ ಅರಸು ಅವರು. ಇವರ ಅವಧಿಯಲ್ಲಿ ಜೀತ ಪದ್ಧತಿ ರದ್ದು, ಸಾಲದ ಜಾಲದಿಂದ ಬಿಡುಗಡೆ, ಬಡವರಿಗೆ ಸೂರು, ನೀರು, ಶಿಕ್ಷಣ, ಆರೋಗ್ಯ ಸೇರಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿ ಗೌರವಯುತ ಬದುಕು ನಡೆಸಲು ಶ್ರಮಿಸಿರುವ ಅರಸು ಅವರ ಕ್ರಾಂತಿಕಾರಕ ಯೋಜನೆಗಳು ಎಂದೆಂದಿಗೂ ಅಮರ ಎಂದರು.
ವಸಂತ ಅನ್ವರಿ, ಮಲ್ಲಿಕಾರ್ಜುನ ಸರಗಣಾಚಾರಿಮಠ, ಮೌನೇಶ ಪಮ್ಮಾರ ಇದ್ದರು.