ಮೆಳೆಯಮ್ಮ, ಚಿಕ್ಕಮ್ಮ ದೇವಿ ರಥೋತ್ಸವ ಸಂಭ್ರಮ

25arsph1ep
Published on

ಅರಸೀಕೆರೆ: ನಗರದ ಶಿವಾಜಿ ಕಾಲನಿಯ ಶ್ರೀ ಮೆಳೆಯಮ್ಮ ಮತ್ತು ಶ್ರೀ ಚಿಕ್ಕಮ್ಮ ದೇವಿ ರಥೋತ್ಸವ ಭಾನುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಶನಿವಾರ ರಾತ್ರಿ ಗ್ರಾಮ ದೇವತೆಗಳಾದ ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಮಲ್ಲಿಗಮ ್ಮದೇವಿ ಸಮ್ಮುಖದಲ್ಲಿ ಶ್ರೀ ಮೆಳೆಯಮ್ಮ ಮತ್ತು ಚಿಕ್ಕಮ್ಮ ದೇವಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಧ್ಯಾಹ್ನ 12ಕ್ಕೆ ಶ್ರೀ ದೇವಿಯವರ ರಥಕ್ಕೆ ಚೆಲುವರಾಯ,ಧೂತರಾಯ ಸ್ವಾಮಿ ಪ್ರದಕ್ಷಿಣೆ ಹಾಕಿ ಗಾಲಿಗಳಿಗೆ ತೆಂಗಿನ ಕಾಯಿ ಹೊಡೆದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಕೆಂಚರಾಯಸ್ವಾಮಿ ಸಿಡಿ ಮಹೋತ್ಸವ ಸೇರಿದಂತೆ ಹಲವು ಉತ್ಸವಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net