ಪರಿಸರ ಉಳಿವಿಗೆ ನಿರಂತರ ಕಾಳಜಿ ಅಗತ್ಯ, ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಎಂ. ರಾಜೇಶ ಅಭಿಮತ

SASI
ಅರಕೇರಾದ ಸಿದ್ದಯ್ಯ ಹವಲ್ದಾರ್ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್‌ನಿಂದ ಮಂಗಳವಾರ ಸಸಿ ನೆಡಲಾಯಿತು. ಯೋಜನಾಧಿಕಾರಿ ಎಂ. ರಾಜೇಶ, ಪ್ರಾಚಾರ್ಯ ಹನುಮಂತ ಚನ್ನೂರು, ಮುಖ್ಯಶಿಕ್ಷಕ ವೆಂಕಟೇಶಪ್ಪ, ವಲಯ ಮೇಲ್ವಿಚಾರಕ ಅಮೀತ್, ಕೃಷಿ ಅಧಿಕಾರಿ ಹುಚ್ಚಪ್ಪ, ಪತ್ರಕರ್ತ ಗುರುಸ್ವಾಮಿ ಇದ್ದರು.
Published on

ಅರಕೇರಾ: ಪರಿಸರ ದಿನ ಕೇವಲ ಆಚರಣೆಗೆ ಸೀಮಿತವಾಗಬಾರದು. ನಿರಂತರವಾಗಿ ಗಿಡಳನ್ನು ನೆಡುವ ಮೂಲಕ ಇತರರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಎಂ. ರಾಜೇಶ ಹೇಳಿದರು.

ಪಟ್ಟಣದ ಸಿದ್ದಯ್ಯ ಹವಲ್ದಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಪ್ರತಿ ಸಸ್ಯ ಪ್ರಭೇವೂ ತನ್ನದೇ ಆದ ವೈಶಿಷ್ಟೃ ಹೊಂದಿದೆ. ಈ ಭಾಗದಲ್ಲಿ ಹೆಚ್ಚು ಬೇವಿನ ಮರಗಳಿವೆ. ಹೀಗಾಗಿ ಕೀಟಗಳ ಸಂತತಿ ಕಡಿಮೆ ಇದೆ. ಮನುಷ್ಯ ಸಂಸ್ಕೃತಿಯನ್ನು ಆಚರಿಸಬೇಕು. ಪ್ರಕೃತಿಯನ್ನು ಉಳಿಸಬೇಕು. ತನ್ನಲ್ಲಿರುವ ವಿಕೃತಿಯನ್ನು ನಾಶಪಡಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಹನುಮಂತ ಚನ್ನೂರು ಮಾತನಾಡಿ, ಆಧುನಿಕ ಯುಗದಲ್ಲಿ ನಾವು ಸೇವಿಸುವ ಆಹಾರ ಪ್ಲಾಸ್ಟಿಕ್‌ನಿಂದ ಕೂಡಿರುವ ಸಾಧ್ಯತೆಗಳಿವೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡನ್ನು ನಾಶಪಡಿಸುತ್ತಿರುವುದರಿಂದ ಅಲ್ಲಿನ ಪ್ರಾಣಿ-ಪಕ್ಷಿಗಳು ನಾಡು ಸೇರುತ್ತಿವೆ. ಪ್ರಾಕೃತಿಕ ಬದಲಾವಣೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಖ್ಯಶಿಕ್ಷಕ ವೆಂಕಟೇಶಪ್ಪ ಮಾತನಾಡಿ, ಶಾಲಾ-ಕಾಲೇಜಿನಲ್ಲಿ ಅನೇಕ ಗಿಡ ಮರಗಳನ್ನು ನೆಡಲಾಗಿತ್ತು. ಒಂದು ಹಂತಕ್ಕೆ ಬೆಳೆದಿದ್ದ ಗಿಡ-ಮರಗಳು ಇಲ್ಲಿನ ವಾತಾವರಣವನ್ನೇ ಬದಲಾಯಿಸಿವೆ. ಮುಖ್ಯವಾಗಿ ವಿದ್ಯಾರ್ಥಿಗಳು ಪರಿಸರದ ಉಳಿವಿಗೆ ವಿಶೇಷ ಕಾಳಜಿ ವಹಿಸಿಬೇಕು. ಇದು ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ 250 ಸಸಿಗಳನ್ನು ಟ್ರಸ್ಟ್‌ನಿಂದ ವಿತರಿಸಲಾಯಿತು. ವಲಯ ಮೇಲ್ವಿಚಾರಕ ಅಮೀತ್, ಕೃಷಿ ಅಧಿಕಾರಿ ಹುಚ್ಚಪ್ಪ, ಪತ್ರಕರ್ತರಾದ ಗುರುಸ್ವಾಮಿ, ಮಹಾಂತೇಶ ಹಿರೇಮಠ, ಆನಂದ ವಿ. ಗುಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net