ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಕಣ್ಣೀರಿನ ಬೀಳ್ಕೊಡುಗೆ

Untitled design (16)
ಸಮುದ್ರ ಗ್ರಾಮದಲ್ಲಿ ಶಾಲೆಯಿಂದ ಶಿಕ್ಷಕ ಯದುಕುಮಾರನನ್ನು ಬೀಳ್ಕೊಡುತ್ತಿರುವ ವಿದ್ಯಾರ್ಥಿಗಳು ಕಣ್ಣೀರಿಟ್ಟರು.
Published on

ಅರಕೇರಾ: ತಾಲೂಕಿನ ಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಜಿಪಿಟಿ ಹುದ್ದೆಗೆ ನೇಮಕವಾದ ಯದುಕುಮಾರ ಅವರಿಗೆ ಬೀಳ್ಕೊಡುಗೆ ನೀಡುವಾಗ ವಿದ್ಯಾರ್ಥಿಗಳು ಶುಕ್ರವಾರ ಕಣ್ಣೀರು ಹಾಕಿದರು.

ನಮ್ಮನ್ನು ಬಿಟ್ಟು ಹೋಗಬೇಡಿ ಸರ್

ಶಿಕ್ಷಕ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದರು. ಶಾಲೆಯಿಂದ ಸಹ ಶಿಕ್ಷಕ ಯದುಕುಮಾರ ಬೇರೆ ಶಾಲೆಗೆ ಹೋಗುತ್ತಿರುವುದು ಬೇಸರ ತರಿಸಿದೆ. ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಲೆ ಶಿಕ್ಷಕನನ್ನು ಅಪ್ಪಿಕೊಂಡು ಭಾವುಕರಾದರು.
ಶಿಕ್ಷಕ ಯದುಕುಮಾರ ಮಾತನಾಡಿ, ಶಾಲೆಯಲ್ಲಿ 13 ವರ್ಷ 6 ತಿಂಗಳು ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಸಮುದ್ರ ಗ್ರಾಮದಲ್ಲಿ ಸೇವೆ ಸಲ್ಲಿಸಿರುವ ದಿನಗಳು ಅವಿಸ್ಮರಣೀಯ. ಮಕ್ಕಳು ಭಾವುಕರಾದ ಕ್ಷಣಗಳು ಎಲ್ಲ ಪ್ರಶಸ್ತಿಗಿಂತ ಮಿಗಿಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net