ಇಗ್ಗುತ್ತಪ್ಪ ದೇವಾಲಯದಲ್ಲಿ ಆರಾಧನಾ ಉತ್ಸವ ಸಂಪನ್ನ

ಇಗ್ಗುತ್ತಪ್ಪ ದೇವಾಲಯದಲ್ಲಿ ಆರಾಧನಾ ಉತ್ಸವ ಸಂಪನ್ನ
Published on

ನಾಪೋಕ್ಲು: ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಸಿಂಹಮಾಸ 10, ಆರಾಧನಾ ಉತ್ಸವ ಸೋಮವಾರ ಸಾಂಪ್ರದಾಯಿಕವಾಗಿ ಭಕ್ತರ ಸಂಗಮದೊಂದಿಗೆ ಸಂಪನ್ನಗೊಂಡಿತು.

ಭಕ್ತರು ತಮ್ಮ ಭಕ್ತಿ ಅನುಸಾರ ತುಲಾಭಾರ ಸೇವೆ, ಪೂಜಾ ಕೈಂಕರ್ಯ, ಸಂಕಲ್ಪ ಸೇವೆ ನೆರವೇರಿಸಿದರು.

ಮಧ್ಯಾಹ್ನ ಇಗ್ಗುತ್ತಪ್ಪನಿಗೆ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿಸಲಾಯಿತು. ದೇವರ ಉತ್ಸವ ಬಲಿ ಜರುಗಿತು. ಉತ್ಸವದಲ್ಲಿ ದೇವಾಲಯ ತಕ್ಕಮುಖ್ಯಸ್ಥರು, ಭಕ್ತಜನ ಸಂಘದ ಪದಾಧಿಕಾರಿಗಳು, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net