ವಿಸಿಬಿ ಸೇತುವೆ ಪುನರ್ ನಿರ್ಮಾಣಕ್ಕೆ ಅನುಮೋದನೆ

New Project
Published on

ಬದಿಯಡ್ಕ: ಕಾಲಹರಣಗೊಂಡು ಸಂಚಾರ ಅಯೋಗ್ಯವಾಗಿ ತಿಂಗಳ ಹಿಂದೆ ಸಂಚಾರ ನಿಷೇಧಿಸಿದ್ದ ಪೈವಳಿಕೆ ಪಂಚಾಯಿತಿ ಉರ್ಮಿ ವಿ.ಸಿ.ಬಿ. ಸೇತುವೆಯನ್ನು ಪುನರ್ ನಿರ್ಮಿಸಲಾಗುತ್ತಿದೆ.

1.23 ಕೋಟಿ ರೂ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ ಎಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ.ಪೈವಳಿಕೆ ಪಂಚಾಯಿತಿ ಕಡೆಂಕೋಡಿ ವಾರ್ಡ್‌ನಲ್ಲಿರುವ ಉರ್ಮಿ ಹೊಳೆಗೆ ಅಡ್ಡಲಾಗಿ ನಿರ್ಮಿಸಲಾದ ವಿಸಿಬಿ ಹಳೆಯದಾಗಿ ಅಸುರಕ್ಷಿತವಾಗಿದ್ದರಿಂದ ಸೇತುವೆ ಮುಚ್ಚಿ ಸಂಚಾರ ನಿಷೇಧಿಸಲಾಗಿತ್ತು. ಉರ್ಮಿ, ಪಲ್ಲಕ್ಕುಡೇಲು, ಕೊಮ್ಮಂಗಳ, ಕುರುಡಪದವು ಪ್ರದೇಶಗಳ ನಾಗರಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು.

ಈ ಪ್ರದೇಶಗಳಲ್ಲಿನ ವಿವಿಧ ಕೃಷಿ ಭೂಮಿಗೆ ನೀರಿನ ಲಭ್ಯತೆ ನಿಂತು ಹೋಗಿತ್ತು. ಸಣ್ಣ ನೀರಾವರಿ ಇಲಾಖೆ ಯೋಜನಾ ನಿಧಿಯಿಂದ ವಿಸಿಬಿ ನಿರ್ಮಾಣಕ್ಕೆ ಹಣ ಹಂಚಿಕೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ತಕ್ಷಣ ಕಾಮಗಾರಿ ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರು ಪ್ರಕಟಿಸಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net