ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿದಾಯಕೂಟ : ಐಲ ಶ್ರೀ ಶಾರದಾ ಎ.ಯು.ಪಿ ಶಾಲೆಯಲ್ಲಿ ಕಾರ್ಯಕ್ರಮ

2
Published on

ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳು, ಹೈಸ್ಕೂಲು ಹಾಗೂ ಹೈಯರ್ ಸೆಕೆಂಡರಿ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಧ್ಯಾಪಕರು ಮುಖ್ಯಶಿಕ್ಷಕರು, ಅಧ್ಯಾಪಕೇತರ ಸಿಬ್ಬಂದಿ ವರ್ಗಕ್ಕೆ ಬೀಳ್ಕೊಡುಗೆ ಸಮಾರಂಭ ಐಲ ಶ್ರೀ ಶಾರದಾ ಎ.ಯು.ಪಿ ಶಾಲೆಯಲ್ಲಿ ಇತ್ತೀಚೆಗೆ ಜರುಗಿತು. ಉಪಜಿಲ್ಲಾ ಶಿಕ್ಷಣಾಧಿಕಾರಿ ರಾಜಗೋಪಾಲ ಕೆ.ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ವಿದ್ಯಾಭ್ಯಾಸ ಉಪನಿರ್ದೇಶಕ ಮಧುಸೂದನನ್ ಟಿ.ವಿ.ಉದ್ಘಾಟಿಸಿದರು.

ನಿವೃತ್ತರಾದ ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ. ವಿ., ಉಪಜಿಲ್ಲಾವಿದ್ಯಾಧಿಕಾರಿ ರಾಜಗೋಪಾಲ ಕೆ.ಅವರನ್ನು ಜಿಲ್ಲಾ ವಿದ್ಯಾಭ್ಯಾಸ ಉಪನಿರ್ದೇಶಕ ಮಧುಸೂದನನ್ ಸನ್ಮಾನಿಸಿದರು. ಉಪಜಿಲ್ಲೆಯಿಂದ 29 ಮಂದಿ ನಿವೃತ್ತ ಅಧ್ಯಾಪಕ ಅಧ್ಯಾಪಕಿಯರು ಮುಖ್ಯಶಿಕ್ಷಕರು ಸಿಬ್ಬಂದಿ ವರ್ಗವನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.

ಎಚ್.ಎಂ ಫಾರಂ ಕಾರ್ಯದರ್ಶಿ ಶ್ಯಾಂ ಭಟ್ ಯು.ಪ್ರಾಸ್ತಾವಿಕವಾಗಿ ಮಾತನಾಡಿದರು. ಡಯಟ್ ಫಾಕಲ್ಟಿ ಮಧು, ಮೀಯಪದವು ಹೈಯರ್ ಸೆಕೆಂಡರಿ ಶಾಲೆ ಪ್ರಾಂಶುಪಾಲ ರಮೇಶ್, ಬಿ.ಪಿ.ಸಿ ಜೋಯ್ ಜಿ., ಬಿ.ಆರ್.ಸಿ ಮಂಜೇಶ್ವರ ಉಪಜಿಲ್ಲಾ ಶಿಕ್ಷಣ ಕಚೇರಿಯ ಸೀನಿಯರ್ ಸುಪರಿಂಟೆಂಡೆಂಟ್ ಜಿತೇಂದ್ರ ಎಸ್.ಎಚ್., ಶ್ರೀ ಶಾರದಾ ಬೋವಿ ಎ.ಯು.ಪಿ ಶಾಲೆ ಮುಖ್ಯಶಿಕ್ಷಕಿ ಜಲಜಾಕ್ಷಿ ಎ., ವಿವಿಧ ಅಧ್ಯಾಪಕ ಸಂಘಟನಾ ಪ್ರತಿನಿಧಿಗಳಾದ ಒ.ಎಂ.ರಶೀದ್, ಅರವಿಂದಾಕ್ಷ ಭಂಡಾರಿ, ರವೀಂದ್ರ, ಶಾಹಿದ್, ಜಯರಾಮ, ದೇವಿಪ್ರಸಾದ್, ರಾಧಾಕೃಷ್ಣ ಶುಭಾಶಂಸನೆಗೈದರು. ಸಂಘಟಕ ಸಮಿತಿ ಅಧ್ಯಕ್ಷ ಸುಕೇಶ ಎ.ಸ್ವಾಗತಿಸಿದರು. ಸತ್ಯಪ್ರಕಾಶ ಇ.ಕೆ.ವಂದಿಸಿದರು. ಮುಖ್ಯಶಿಕ್ಷಕ ಇಸ್ಮಾಯಿಲ್ ಮೀಯಪದವು ಹಾಗೂ ಉಣ್ಣಿಕೃಷ್ಣನ್ ಕಂದಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net