ಕ್ಷೇತ್ರದ ಬೇಡಿಕೆಗಳಿಗೆ ಸೂಕ್ತ ಅನುದಾನ

Published on

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಒತ್ತಡದ ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದು ಶಾಸಕ ಕೆ.ಎಚ್​. ಪುಟ್ಟಸ್ವಾಮಿ ಗೌಡ ಹೇಳಿದರು.

ತಾಲೂಕಿನ ನಗರಗೆರೆ ಹೋಬಳಿಯ ಬಂದಾರಲ್ಲಹಳ್ಳಿಯಲ್ಲಿ 3ಕೋಟಿ ರೂ.ವೆಚ್ಚದ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರ ಎಲ್ಲ ವರ್ಗದ ಜನರನ್ನ ದೃಷ್ಟಿಯಲ್ಲಿ ಇರಿಸಿಕೊಂಡು ಯೋಜನೆ ರೂಪಿಸುತ್ತಿದೆ. ಪಂಚ ಗ್ಯಾರಂಟಿಗಳ ಯೋಜನೆಗಳ ಅನುಷ್ಠಾನದ ನಡುವೆಯೂ ಕ್ಷೇತ್ರದ ಬೇಡಿಕೆಗಳಿಗೆ ಸೂಕ್ತ ಅನುದಾನ ಒದಗಿಸುತ್ತಿದೆ. ಆದ್ದರಿಂದ ತಾಲೂಕಿನ ಗ್ರಾಮೀಣ ರಸ್ತೆಗಳಿಗೆ ಆದ್ಯತೆ ನೀಡಲಾಗಿದೆ.ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಕಾಲನಿ, ಸ್ಮಶಾನ ಅಭಿವೃದ್ಧಿಗೆ ಮಾಡಲಾಗುವುದು.ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಅಧಿಕ ಸಂಖ್ಯೆಯಲ್ಲಿರುವ ಕಾರಣ ಅವರ ಆರ್ಥಿಕ ಪ್ರಗತಿಗೆ ಕಟಿಬದ್ಧನಾಗಿದ್ದೇನೆ. ಹಲವು ಕಾರ್ಯಕ್ರಮ ಅನುಷ್ಠಾನಕ್ಕೆ ತರುತ್ತಿದ್ದೇನೆ. ಕಾಮಗಾರಿ ನಡೆಸುವ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು. ಕಾಲಮಿತಿಯಲ್ಲಿ

ಕಾಮಗಾರಿ ಮುಗಿಸಬೇಕು ಎಂದರು.

ಮುಖಂಡ ನಾಗೇಂದ್ರ ಮಾತನಾಡಿ, ಶಾಸಕರು ಗ್ರಾಮೀಣ ಅಭಿವೃದ್ಧಿಯ ಅಗತ್ಯತೆ, ಜನರ ಅಪೆಕ್ಷೆ ಅರಿತು ಹಳ್ಳಿಗಳಲ್ಲಿ ನೀರು, ಚರಂಡಿ, ರಸ್ತೆಯಂತಹ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡುವುದು ಆಶಾದಾಯಕ ಬೆಳವಣಿಗೆ. ಶಾಸಕರ ಅಭಿವೃದ್ಧಿ ಕಾಮಗಾರಿ ಪ್ರತಿಯೊಂದು ಹಳ್ಳಿಯಲ್ಲಿ ನಡೆಯುತ್ತಿರುವುದು ತಾಲೂಕಿನ ಪ್ರಗತಿಗೆ ಪೂರಕವಾಗಿದೆ ಎಂದರು.ಮುಖಂಡ ಆರ್​.ಆರ್​.ರೆಡ್ಡಿ ಮಾತನಾಡಿದರು.ಮುಖಂಡರಾದ ಬಾಬು, ಹನುಮಂತರೆಡ್ಡಿ, ಕೋಡಿಲ್ಲಪ್ಪ, ವಿಜಯರೆಡ್ಡಿ, ನಂದೀಶ್​, ಅಸ್ಲಾಂ, ರಿಯಾಜ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net