

ಬೇಲೂರು: ತಾಲೂಕು ಸರ್ಕಾರಿ ನೌಕರರ ಸಂಘದ ವಿವಿಧ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಮಂಗಳವಾರ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಆರ್.ಮಂಜುನಾಥ್ ಅಧ್ಯಕ್ಷತೆಯಲ್ಲಿ ನೇಮಕ ಮಾಡಲಾಯಿತು.
ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಆರ್.ಮಂಜುನಾಥ್ ಅವರ ವಿವೇಚನೆಯಂತೆ ವಿವಿಧ ಹುದ್ದೆಗಳಿಗೆ ಈ ಕೆಳಕಂಡವರನ್ನು ನೇಮಕ ಮಾಡಲಾಯಿತು.
ಜೂನಿಯರ್ ಕಾಲೇಜಿನ ಧರ್ಮೇಗೌಡ ಕಾರ್ಯದರ್ಶಿ, ಕ್ಷೇತ್ರ ಶಿಕ್ಷಣ ಇಲಾಖೆಯ ರಾಜೇಗೌಡ ಗೌರವಾಧ್ಯಕ್ಷ, ಹಿರಿಯ ಪ್ರಾಥಮಿಕ ಶಾಲೆಯ ಪೂರ್ಣೇಶ್ ಹಾಗೂ ಪದವಿ ಶಿಕ್ಷಣ ಇಲಾಖೆಯ ವೀರಭದ್ರಪ್ಪ ಹಿರಿಯ ಉಪಾಧ್ಯಕ್ಷರನ್ನಾಗಿ, ಅರಣ್ಯ ಇಲಾಖೆಯ ಸುಭಾಶ್ ಚಂದ್ರ, ಜಿ.ಪಂ.ನ ವೆಂಕಟರಾಮು, ಪ್ರೌಢಶಾಲೆ ವಿಭಾಗದ ಹೇಮಂತಕುಮಾರ್ ಅವರನ್ನು ಉಪಾಧ್ಯಕ್ಷರನ್ನಾಗಿ, ತಾ.ಪಂ.ನಂದಕುಮಾರ್ ಹಾಗೂ ಆರೋಗ್ಯ ಇಲಾಖೆಯ ಎಚ್.ಎನ್.ವನಿತಾಮಣಿ ಜಂಟಿ ಕಾರ್ಯದರ್ಶಿಯಾಗಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಕೆ.ತೇಜಸ್ವಿನಿ, ಜಲಸಂಪನ್ಮೂಲ ಇಲಾಖೆಯ ಮಧುಕುಮಾರ್, ಸಮಾಜ ಕಲ್ಯಾಣ ಇಲಾಖೆಯ ನಾಗೇಶ್, ಭೂ ಕಂದಾಯ ಇಲಾಖೆಯ ಮಲ್ಲಿಕಾರ್ಜುನಸ್ವಾಮಿ ಸಂಘಟನಾ ಕಾರ್ಯದರ್ಶಿಯಾಗಿ, ಆರೋಗ್ಯ ಇಲಾಖೆಯ ಎಚ್.ಆರ್.ತನುಜಾ ಹಾಗೂ ಕೃಷಿ ಇಲಾಖೆಯ ಎಚ್.ಎಂ. ಕಾವ್ಯಶ್ರೀ ಅವರನ್ನು ಸಾಂಸ್ಕೃತಿಕ ಕಾರ್ಯದರ್ಶಿಯನ್ನಾಗಿ, ಕೆ.ಸಿ.ವಸಂತಾ ಹಾಗೂ ಆಂತರಿಕ ಲೆಕ್ಕಪರಿಶೋಧಕರನ್ನಾಗಿ ವೇಣುಗೋಪಾಲ್ ಅವರನ್ನು ಹಾಗೂ ನಾಮ ನಿದೇರ್ಶಕರನ್ನಾಗಿ ಭಾನುಪ್ರಕಾಶ್, ಗಣೇಶ್, ಈರಯ್ಯ, ಚನ್ನಕೇಶವ ಅವರನ್ನು ನೇಮಕಮಾಡಲಾಯಿತು.