

ಬೆಂಗಳೂರು:ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜರಾಜೇಶ್ವರಿ ವಲಯದ 14 ವಾರ್ಡ್‌ಗಳಿಗೆ ಪಾಲಿಕೆ ಮತ್ತು ಜಲ ಮಂಡಳಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಿ ಬಿಬಿಎಂಪಿ ಆದೇಶಿಸಿದೆ.
ಜಾಲಹಳ್ಳಿ, ಜೆ.ಪಿ.ಪಾರ್ಕ್, ಯಶವಂತಪುರ, ಹೆಚ್‌ಎಂಟಿ, ಲಕ್ಷ್ಮೀದೇವಿನಗರ, ಕೊಟ್ಟಿಗೇಪಾಳ್ಯ, ಲಗ್ಗೆರೆ, ಜ್ಞಾನಭಾರತಿ, ಆರ್.ಆರ್.ನಗರ, ದೊಡ್ಡಬಿದರಕಲ್ಲು, ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ, ಹೆಮ್ಮಿಗೇಪುರ ವಾರ್ಡ್‌ಗಳಿಗೆ ನೇಮಕವಾಗಿರುವ ನೋಡಲ್ ಅಧಿಕಾರಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ದೂರು ಬಂದ ತಕ್ಷಣ ಜಲಮಂಡಳಿ ಅಭಿಯಂತರರೊಂದಿಗೆ ಸಮನ್ವಯ ಹೊಂದಿ ನೀರಿನ ಸಮಸ್ಯೆ ಬಗೆಹರಿಸಬೇಕು. ಬೋರ್‌ವೆಲ್‌ಗಳಲ್ಲಿ ನೀರಿಲ್ಲದ ಕಡೆ ನೀರಿನ ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ನೋಡಲ್ ಅಧಿಕಾರಿಗಳ ಮೇಲುಸ್ತುವಾರಿ ನೋಡಿಕೊಳ್ಳಲು ಆರ್.ಆರ್.ನಗರದ ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್ ಅವರಿಗೆ ವಹಿಸಲಾಗಿದೆ ಎಂದು ಆರ್.ಆರ್.ನಗರ ವಲಯದ ಜಂಟಿ ಆಯುಕ್ತರು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸುತ್ತಿರುವ ಟ್ಯಾಂಕರ್‌ಗಳು:
ಪ್ರತ್ಯೇಕ ದರಪಟ್ಟಿ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ನೀರು ಸರಬರಾಜು ಮಾಡುವ ಖಾಸಗಿ ವಾಟರ್ ಟ್ಯಾಂಕರ್‌ಗಳ ಮಾಲೀಕರು ಉಲ್ಲಂಸುತ್ತಿದ್ದಾರೆ. ರಾಜಧಾನಿಯಲ್ಲಿ ಜಲಕ್ಷಾಮವನ್ನೇ ಮುಂದಿಟ್ಟುಕೊಂಡು ಮಾಲೀಕರು, ಮನಬಂದಂತೆ ಹಣ ಸುಳಿಗೆ ಮಾಡುತ್ತಿದ್ದಾರೆ. 5 ಕಿ.ಮೀ.ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ 6 ಸಾವಿರ ಲೀ.ಸಾಮರ್ಥ್ಯದ ವಾಟರ್ ಟ್ಯಾಂಕರ್‌ಗೆ 600 ರೂ., 8 ಸಾವಿರ ಲೀ. ಸಾಮರ್ಥ್ಯದ ವಾಟರ್ ಟ್ಯಾಂಕರ್‌ಗೆ 700 ರೂ ಹಾಗೂ 12 ಸಾವಿರ ಲೀ.ಸಾಮರ್ಥ್ಯದ ವಾಟರ್ ಟ್ಯಾಂಕರ್‌ಗೆ ಒಂದು ಸಾವಿರ ರೂ.ನಿಗದಿಪಡಿಸಲಾಗಿದೆ. 5 ಕಿ.ಮೀ.ನಿಂದ 10 ಕಿ.ಮೀ.ವರೆಗೆ 6 ಸಾವಿರ ಲೀ.ಗೆ 750 ರೂ, 8 ಸಾವಿರ ಲೀ.ಗೆ 850 ರೂ ಹಾಗೂ 12 ಸಾವಿರ ಲೀ.ಗೆ 1,200 ರೂ.ನಿಗದಿಗೊಳಿಸಲಾಗಿದೆ. ಒಂದು ತಿಂಗಳವರೆಗೆ ಪ್ರತಿ ನಿತ್ಯ ಸರಬರಾಜು ಮಾಡುವ ವಾಟರ್ ಟ್ಯಾಂಕ್‌ಗೆ 510 ರೂ ಹಾಗೂ 5 ಕಿ.ಮೀ.ನಿಂದ 10 ಕಿ.ಮೀ.ವರೆಗೆ ನೀರು ಸರಬರಾಜು ಮಾಡುವ ಟ್ಯಾಂಕರ್‌ಗೆ 650 ರೂ.ನಿಗದಿಪಡಿಸಲಾಗಿದೆ. 8 ಸಾವಿರ ಲೀ.ನಿಂದ 12 ಸಾವಿರ ಲೀ.ವರೆಗಿನ ಪ್ರತಿ ಕಿಲೋ ಲೀಟರ್‌ಗೆ 50 ರೂ.ಪಾವತಿಸಬೇಕು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಗುರುವಾರ ಆದೇಶ ಹೊರಡಿಸಿದ್ದರು. ಆದರೆ, ಪ್ರತಿ ಟ್ಯಾಂಕ್‌ಗೆ ಕನಿಷ್ಠ 2 ಸಾವಿರ ರೂ.ನಿಂದ ಹಿಡಿದು ಗರಿಷ್ಠ 5 ಸಾವಿರ ರೂ.ವರೆಗೆ ವಸೂಲಿ ಮಾಡುತ್ತಿದ್ದಾರೆ. ಸರ್ಕಾರದ ಹೊರಡಿಸಿರುವ ದರಪಟ್ಟಿ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ. ವಿಧಿಯಿಲ್ಲದೆ ನೀರಿಗಾಗಿ ಹೆಚ್ಚು ಹಣ ಕೊಡಬೇಕಿದೆ ಎಂದು ನಾಗರಬಾವಿ ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಸಹಾಯವಾಣಿ ಆರಂಭ:
ಬಿಬಿಎಂಪಿ ಹೊರ ವಲಯ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಬರುವ 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. 1533 ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಕುರಿತು ಜನರು ಮಾಹಿತಿ ನೀಡಬಹುದು. ಈ ಸಮಸ್ಯೆ ಆಲಿಸಲು ಪ್ರತ್ಯೇಕ ಮೇಲುಸ್ತುವಾರಿಗಾಗಿ ದಾಸರಹಳ್ಳಿ ವಲಯದ ಕಾರ್ಯಪಾಲಕ ಅಭಿಯಂತರ ಧರಣೇಂದ್ರ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ.ಬಿಬಿಎಂಪಿ ವ್ಯಾಪ್ತಿಯ ಇನ್ನುಳಿದ ವಾರ್ಡ್‌ಗಳಲ್ಲಿ ಕಂಡುಬರುವ ಕುಡಿಯುವ ನೀರಿನ ಸಮಸ್ಯೆ ಕುರಿತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 1916 ಸಹಾಯವಾಣಿಗೆ ಕರೆ ಮಾಡಬಹುದು.
ವಾರ್ಡ್ ಪಾಲಿಕೆ ಅಧಿಕಾರಿ ಹೆಸರು ಜಲಮಂಡಳಿ ಅಧಿಕಾರಿ ಹೆಸರು
ಜಾಲಹಳ್ಳಿ ಡಿ.ಹನುಮಂತರಾಯ, ನಾಗರಾಜು
81050 05285 96864 48013
ಜೆ.ಪಿ.ಪಾರ್ಕ್ ವಿಘ್ನೇಶ್ವರ್, ಲಕ್ಷ್ಮೀನರಸಿಂಹಯ್ಯ
82770 32015 98454 44495
ಯಶವಂತಪುರ ಅರುಣ್‌ಕುಮಾರ್, ಕೆ.ಎಸ್.ಕಿಶೋರ್
94488 82642 82172 96837
ಎಚ್‌ಎಂಟಿ ರಮೇಶ್ ಕಾರ್ತಿಕ್
94807 35211 70263 28863
ಲಕ್ಷ್ಮೀದೇವಿನಗರ ವರನಾರಾಯಣ ತೇಜಸ್
90667 45942 97409 84166
ಲಗ್ಗೆರೆ ಬಿ.ಕೆ.ದಿನೇಶ್‌ಕುಮಾರ್ ಎಸ್.ನಂದೀಶ್ ಕುಮಾರ್
94487 19897 96324 35522
ಕೊಟ್ಟಿಗೇಪಾಳ್ಯ ಆರೀಫ್ ವಿ.ಹರ್ಷ
99002 60607 99865 55502
ಜ್ಞಾನಭಾರತಿ ಮಧು ಎಂ.ಎಸ್.ವಿಶ್ವನಾಥ್
81473 51991 99006 29915
ಆರ್.ಆರ್.ನಗರ ದೀಪಕ್ ವಿಶ್ವನಾಥ್
8147351991 99006 29915
ಹೇರೋಹಳ್ಳಿ ಬಿ.ರಮೇಶ್ ಸುಧಾ
94806 88224 95351 82299
ಉಲ್ಲಾಳ್ ಸಿದ್ದರಾಜೇಗೌಡ ಚಂದನ
99808 06986 95352 52015
ಕೆಂಗೇರಿ ಗುರುಪ್ರಸಾದ್ ರಾಹುಲ್ ರಥೋಡ್
99862 38606 70262 66677
ಹೆಮ್ಮಿಗೇಪುರ ಸಾಮಂದಯ್ಯ
99866 93857