ಬೆಂ.ವಿವಿ ಎಂಬಿಎ ಸಂಜೆ ಕಾಲೇಜಿಗೆ ಅರ್ಜಿ ಆಹ್ವಾನ

Bangalore University
Published on

ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿಗೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಕೆನರಾ ಬ್ಯಾಂಕ್ ಸ್ಕೂಲ್ ಆ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದಲ್ಲಿ ಖಾಲಿ ಉಳಿದಿರುವ ಎಂ.ಬಿ.ಎ (ಸಂಜೆ) ಸ್ನಾತಕೋತ್ತರ ಪದವಿ ಕೋರ್ಸುನ ಸೀಟುಗಳ ಪ್ರವೇಶಾತಿಗಾಗಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ.

ಆಸಕ್ತರು UUCMS ಆನ್‌ಲೈನ್ ಪೋರ್ಟಲ್ https://uucms.karnataka.gov.in/Login/Index ,

ಮುಖಾಂತರ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜ.13 ಕೊನೆಯ ದಿನವಾಗಿದೆ. 200 ರೂ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಜ.15 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಅಂತರಜಾಲ https://bangaloreuniversity.karnataka.gov.in ನಲ್ಲಿ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net