ಕಾರ್ಕಳ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ತರಬೇತಿಗೆ ಅರ್ಜಿ

Application-1-1280x720
Published on

ಕಾರ್ಕಳ: ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆಯಡಿ, ಕಾರ್ಕಳ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ.)ಯಲ್ಲಿ ಸಿಸ್ಕೊ ಐ.ಟಿ. ಎಸೆನ್ಸಿಯಲ್ಸ್, ಟ್ಯಾಲಿ ಪ್ರೈಮ್/ಅಕೌಂಟ್ಸ್ ಎಕ್ಸಿಕ್ಯೂಟಿವ್, ಮಾಸ್ಟರ್ (ಸಿಎಎಂ), ಸಿ.ಎನ್.ಸಿ ಪ್ರೋಗ್ರಾಮಿಂಗ್ ಆಂಡ್ ಆಪರೇಶನ್-ಟರ್ನಿಂಗ್, ಸಿ.ಎನ್.ಸಿ ಪ್ರೋಗ್ರಾಮಿಂಗ್ ಆಂಡ್ ಆಪರೇಶನ್-ಟರ್ನಿಂಗ್, ಸಿ.ಎನ್.ಸಿ ಪ್ರೋಗ್ರಾಮಿಂಗ್ ಆಂಡ್ ಆಪರೇಶನ್-ಮೆಷಿನಿಷ್ಟ್, ಅಟೊ ಕ್ಯಾಡ್, ಸಿಎಟಿಐಎ ಮತ್ತು ಸಿಎಟಿಐಎ ಕೋರ್ಸುಗಳಲ್ಲಿ 2ರಿಂದ 3 ತಿಂಗಳ ಅವಧಿಯ(ದಿನಕ್ಕೆ ಕನಿಷ್ಟ 2ರಿಂದ 3 ಗಂಟೆ) ಉಚಿತ ಅಲ್ಪಾವಧಿ ಕೌಶಲ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳು ಉದ್ಯೋಗಾಧಾರಿತ ಉಚಿತ ಕೌಶಲ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಕಳದ ಕಾಬೆಟ್ಟುವಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಆವರಣದ ಕೆ.ಜಿ.ಟಿ.ಟಿ.ಐ. ಸಂಸ್ಥೆಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು(08258-200451, 8277741731) ಎಂದು ಕಾರ್ಕಳ ಕೆ.ಜಿ.ಟಿ.ಟಿ.ಐ. ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net