

ಬೆಂಗಳೂರು: ನ್ಯಾಯವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಹಾಗೂ ಪ್ರಾದೇಶಿಕ ನ್ಯಾಯವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ 84 ವೈಜ್ಞಾನಿಕ ಅಧಿಕಾರಿಗಳ ನೇಮಕಾತಿಗೆ ಪೊಲೀಸ್ ಇಲಾಖೆ ಅರ್ಜಿ ಆಹ್ವಾನಿಸಿದೆ.
ಜೀವಶಾಸ್ತ್ರ ವಿಭಾಗದ 12 ಹುದ್ದೆಗಳು, ರಸಾಯನಶಾಸ್ತ್ರ ವಿಭಾಗದ 8, ನಾರ್ಕೋಟಿಕ್ಸ್ ವಿಭಾಗದ 2 ಮತ್ತು ಭೌತಶಾಸ್ತ್ರ ವಿಭಾಗದ 5, ಡಿಎನ್ಎ ವಿಭಾಗದ 2, ಪ್ರಶ್ನಿತ ದಸ್ತಾವೇಜು ವಿಭಾಗದ10, ಅಗ್ನಿ ಅಸ್ತ್ರ ವಿಭಾಗದ 6, ಫೊರೆನ್ಸಿಕ್ ಮನೋವಿಜ್ಞಾನದ 1, ಕಂಪ್ಯೂಟರ್ ಫೊರೆನ್ಸಿಕ್ ವಿಭಾಗದ 5, ಮೊಬೈಲ್ ಪೊರೆನ್ಸಿಕ್ ವಿಭಾಗದ 5, ಆಡಿಯೋ ವಿಡಿಯೋ ವಿಭಾಗದ 5, ವಿಷ ವಿಜ್ಞಾನ ವಿಭಾಗದ 21, ಪೋಟೋಗ್ರಫಿ ವಿಭಾಗದ 2 ಸೇರಿ 84 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಜೂನ್ 7ರ ಬೆಳಗ್ಗೆ 10 ಗಂಟೆಯಿಂದ ಅರ್ಜಿ ಸಲ್ಲಿಸಬಹುದು. ಜುಲೈ 7ರ ಸಂಜೆ 6 ಗಂಟೆಗೆ ಅರ್ಜಿ ಸಲ್ಲಿಕೆಯ ಅವಧಿ ಮುಗಿಯಲಿದೆ. ಶುಲ್ಕ ಪಾವತಿಗೆ ಅಧಿಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಜುಲೈ 9ರ ಕಚೇರಿ ಸಮಯದವರೆಗೂ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ನೇಮಕಾತಿ ವಿಭಾಗದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ.