ಸ್ಟಾಲ್ ಅಳವಡಿಕೆಗೆ ಅರ್ಜಿ ಆಹ್ವಾನ

Published on

ಕಾಸರಗೋಡು: ಕಾರಡ್ಕ ಬ್ಲಾಕ್ ಪಂಚಾಯಿತಿ ವತಿಯಿಂದ ಡಿಸೆಂಬರ್ 24ರಿಂದ 30ರವರೆಗೆ ಪೊವ್ವಲ್ ಬ್ಲಾಕ್ ಪಂಚಾಯಿತಿ ಮೈದಾನದಲ್ಲಿ ಆಯೋಜಿಸಲಿರುವ ಕೃಷಿ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ(ಎಫ್‌ಎಎಂಇ- 2024) ಅಂಗವಾಗಿ ವಿವಿಧ ರೀತಿಯ ಪ್ರದರ್ಶನ ಮತ್ತು ಮಾರುಕಟ್ಟೆ ಸ್ಟಾಲ್‌ಗಳನ್ನು ನಡೆಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು, ಸಂಘಟನೆಗಳು ಮತ್ತು ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ ಡಿಸೆಂಬರ್ 5 ಆಗಿದ್ದು, ಮಾಹಿತಿಗಾಗಿ 9446943491 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net