

ಕಾಸರಗೋಡು: ಪರಿಶಿಷ್ಟ ವರ್ಗ ಅಭಿವೃದ್ಧಿ ಕಾರ್ಯಾಲಯ ವಿನ್ಯಾಸಗೊಳಿಸಿ ಕಾರ್ಯಗತಗೊಳಿಸುವ ಯೋಜನೆ ಅಕ್ರೆಡಿಟೆಡ್ ಇಂಜಿನಿಯರ್, ಓವರ್ ಸಿಯರ್ ನೇಮಕಾತಿಗೆ ಪರಪ್ಪ ಟ್ರೈಬಲ್ ಡೆವಲಪ್‌ಮೆಂಟ್ ಆಫೀಸ್ ಅಧೀನದಲ್ಲಿ ಬರುವ ಪರಿಶಿಷ್ಟ ವರ್ಗ ವಿಭಾಗಕ್ಕೆ ಸೇರಿದ ಯುವತಿ-ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಐಟಿ, ಬಿ.ಟೆಕ್ ಕಂಪ್ಯೂಟರ್ ಸೈನ್ಸ್, ಬಿ.ಸಿ.ಎ, ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಅರ್ಹತೆಯುಳ್ಳವರು ಆ.19ರ ಸಂಜೆ 5ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಗಳು ಟ್ರೈಬಲ್ ಡೆವಲಪ್‌ಮೆಂಟ್ ಆಫೀಸ್ ಪರಪ್ಪ, ಟ್ರೈಬಲ್ ಎಕ್ಸ್‌ಟೆನ್ಶನ್ ಆಫೀಸ್ ಪನತ್ತಡಿ, ಭೀಮನಡಿ ಹಾಗೂ www.stdd.kerala.gov.in ಮೂಲಕವೂ ಲಭಿಸುವುದು. ಮಾಹಿತಿಗಾಗಿ (0467 2960111) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.