

ಬೆಳ್ತಂಗಡಿ: ರಾಷ್ಟ್ರಪ್ರೇಮದೊಂದಿಗೆ ಗುಣಾತ್ಮಕ ವಿಚಾರಗಳನ್ನು ಬೆಳೆಸಿಕೊಂಡು ಏಳಿಗೆ ಹೊಂದುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು ಎಂದು ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಪ್ರಜ್ವಲಾ ಡಿ.ಆರ್ ಹೇಳಿದರು.
ವಾಣಿ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದರು.
ಸ್ವತಂತ್ರ ಭಾರತದಲ್ಲಿ ನಾವು ನೆಮ್ಮದಿ ಕಾಣಬೇಕಾದರೆ ಜನರನ್ನು ದಾರಿ ತಪ್ಪಿಸುವ ವಿಚಾರಗಳಿಂದ ದೂರ ಇರಬೇಕು. ಯುವ ಜನಾಂಗ ಆಧುನಿಕ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಳ್ಳದೆ ಜ್ಞಾನ ಹೊಂದುವಲ್ಲಿ ಬಳಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಸ್ವಾಗತಿಸಿದರು. ಉಪನ್ಯಾಸಕ ಮಹಾಬಲ ಗೌಡ ವಂದಿಸಿದರು. ಉಪನ್ಯಾಸಕಿ ಲತಾಶ್ರೀ ಕಾರ್ಯಕ್ರಮ ನಿರೂಪಿಸಿದರು.