ಬಾಕಿ ಉಳಿದ ವೇತನ ಮಂಜೂರುಗೊಳಿಸಿ : ಎನ್‌ಎನ್‌ಡಿಪಿ ಒಕ್ಕೂಟದಿಂದ ಸಚಿವರಿಗೆ ಮನವಿ

06
Published on

ಕಾಸರಗೋಡು: ಮಲಬಾರ್ ಪ್ರದೇಶದಲ್ಲಿ ಎಸ್‌ಎನ್‌ಡಿಪಿ ಯೂನಿಯನ್ ನೇತೃತ್ವದಲ್ಲಿರುವ ದೇವಾಲಯಗಳಲ್ಲಿ ಹುದ್ದೆಗಳನ್ನು ಹೊಂದಿರುವ ಸ್ಥಾನಿಕರಿಗೆ ವೇತನ ಮಂಜೂರುಗೊಳಿಸಲು ಬಜೆಟ್‌ನಲ್ಲಿ ಹಣ ಮೀಸಲಿರಿಸಬೇಕು ಎಂದು ಜಿಲ್ಲೆಯ ಎಸ್‌ಎನ್‌ಡಿಪಿ ಒಕ್ಕೂಟ ವತಿಯಿಂದ ಸಚಿವ ವಿ.ಎನ್.ವಾಸವನ್ ಅವರಿಗೆ ಮನವಿ ಸಲ್ಲಿಸಲಾಯಿತು.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾಸರಗೋಡಿಗೆ ಆಗಮಿಸಿದ್ದ ಸಚಿವರನ್ನು ಯೂನಿಯನ್ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಸ್ಥಾನಿಕರಿಗೆ 1,600 ರೂ. ಮಾಸಿಕ ವೇತನ ನೀಡಲಾಗುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಲಭಿಸಿಲ್ಲ. ಕೂಡಲೇ ಈ ಮೊತ್ತ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಎಸ್‌ಎನ್‌ಡಿಪಿ ಕಾಸರಗೋಡು ಒಕ್ಕೂಟ ಕಾರ್ಯದರ್ಶಿ ಗಣೇಶ ಪಾರೆಕಟ್ಟ, ಉದುಮ ಒಕ್ಕೂಟ ಕಾರ್ಯದರ್ಶಿ ಜಯಾನಂದನ್ ಪಾಲಕ್ಕುನ್ನು, ಹೊಸದುರ್ಗ ಒಕ್ಕೂಟ ಕಾರ್ಯದರ್ಶಿ ಪಿ.ವಿ.ವೇಣುಗೋಪಾಲನ್, ಯೋಗಂ ವೆಳ್ಳರಿಕುಂಡ್ ಒಕ್ಕೂಟ ಕಾರ್ಯದರ್ಶಿ ಪಿ.ಆರ್.ಶಶಿಧರನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net