ವಕೀಲರ ಮೇಲಿನ ಹಲ್ಲೆಗೆ ಖಂಡನೆ, ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ

14 ANKOLA1 appeal
Published on

ಅಂಕೋಲಾ: ಹಳಿಯಾಳ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ. ಅಸ್ಬೇಕರ ಎಂಬುವರ ಮೇಲೆ ಕಕ್ಷಿಗಾರರೊಬ್ಬರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಖಂಡಿಸಿ ಅಂಕೋಲಾ ತಾಲೂಕು ವಕೀಲರ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.


ತಾಲೂಕು ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ ಮಾತನಾಡಿ, ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಕಕ್ಷಿಗಾರರೊಬ್ಬರು ವಕೀಲರ ಸಂಘದ ಅಧ್ಯಕ್ಷರೂ ಆಗಿರುವ ಅಸ್ಬೇಕರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಎಂದರು.


ತಹಸೀಲ್ದಾರ್ ಪರವಾಗಿ ಉಪತಹಸೀಲ್ದಾರ್ ಸುರೇಶ ಹರಿಕಂತ್ರ ಮನವಿ ಸ್ವೀಕರಿಸಿದರು.


ವಕೀಲರ ಸಂಘದ ಉಪಾಧ್ಯಕ್ಷ ನಿತ್ಯಾನಂದ ಕವರಿ, ಖಜಾಂಚಿ ಆರ್.ಟಿ. ಗೌಡ, ಸಹಕಾರ್ಯದರ್ಶಿ ಮಮತಾ ಕೆರೆಮನೆ, ಸುಭಾಶ ನಾರ್ವೇಕರ, ಉಮೇಶ ನಾಯ್ಕ, ಬಿ.ಡಿ. ನಾಯ್ಕ, ನಾಗಾನಂದ ಬಂಟ, ಬಿ.ಟಿ. ನಾಯಕ, ಗಜಾನನ ನಾಯ್ಕ, ಮನೀಷ ಆನಂದಗಿರಿ, ಸುರೇಶ ಬಾನಾವಳಿಕರ, ಪ್ರತಿಭಾ ನಾಯ್ಕ, ಹೀನಾ ಕೌಸರ, ತೇಜು ಬಂಟ, ಸಂತೋಷ ನಾಯ್ಕ, ಜಗದೀಶ ಹಾರವಾಡೇಕರ, ರಾಜು ಹರಿಕಂತ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net