

ಗುಂಡ್ಲುಪೇಟೆ: ಪಟ್ಟಣದ ಎಚ್.ಎಸ್.ಮಹದೇವ ಪ್ರಸಾದ್ ಬಡಾವಣೆಯಲ್ಲಿ ಮೊಬೈಲ್ ಟವರ್ ಕಾಮಗಾರಿ ಸ್ಥಗಿತಗೊಳಿಸುವಂತೆ ಮುಸ್ಲಿಂ ಸಂಘಟನೆಯ ಸದಸ್ಯರು ಪುರಸಭೆಗೆ ಮನವಿ ಸಲ್ಲಿಸಿದರು.
ಸೋಷಿಯಲ್ ಡೆವಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ವಾರ್ಡ್‌ನ ನಿವಾಸಿಗಳು ಗುರುವಾರ ಪುರಸಭೆ ಮುಖ್ಯಾಧಿಕಾರಿ ಶರವಣ ಅವರನ್ನು ಭೇಟಿ ಮಾಡಿ ಟವರ್ ಕಾಮಗಾರಿ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ಮನವಿಪತ್ರ ಸಲ್ಲಿಸಿದರು.
ಇಮ್ರಾನ್ ಖಾನ್, ತೌಸಿಪ್ ಪಾಷ , ಜಾಮಿಯಾ ಮಸೀದಿ ಉಪಾಧ್ಯಕ್ಷ ಸೈಯದ್ ಅಕ್ರಂ, ಮದಿನಾ ಮಸೀದಿ ಅಧ್ಯಕ್ಷ ಅಬ್ಜಲ್ ಪಾಷಾ, ಮುಕ್ತರ್ ಝಫ್ರೋ ಧಾರ್ಮಿಕ ಗುರು ಸಲೀಂ ವಸೀಮ್, ವಸೀಮ್ ಪಾಷಾ ಇತರರು ಇದ್ದರು.