ಆನೆ ಉಪಟಳ ನಿವಾರಣೆ: ಶಾಸಕ ಹರೀಶ್ ಪೂಂಜಗೆ ಮನವಿ

aane
ಕಡಿರುದ್ಯಾವರ ಗ್ರಾಮ ಆನೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಶಾಸಕ ಹರೀಶ್ ಪೂಂಜಗೆ ಮನವಿ ನೀಡಲಾಯಿತು.
Published on

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮ ಆನೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಕಡಿರುದ್ಯಾವರ ಗ್ರಾಮದಲ್ಲಿ ಕಾಡಾನೆ ಉಪಟಳವನ್ನು ಶಾಶ್ವತವಾಗಿ ತಪ್ಪಿಸುವ ಸಲುವಾಗಿ ಕಾಡಂಚಿನಲ್ಲಿ ಆನೆಕಂದಕ ಮತ್ತು ಸೋಲಾರ್ ವಿದ್ಯುತ್ ಬೇಲಿ ರಚನೆ ಮಾಡುವ ಮುಖ್ಯ ಬೇಡಿಕೆಯೊಂದಿಗೆ ಇನ್ನೂ ಅನೇಕ ಬೇಡಿಕೆಗಳೊಂದಿಗೆ ಶಾಸಕ ಹರೀಶ್ ಪೂಂಜ ಅವರಿಗೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಹಾಗೂ ವಲಯ ಅರಣ್ಯಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಸಮಿತಿ ಅಧ್ಯಕ್ಷ ಸಂತೋಷ್ ಗೌಡ ವಳಂಬ್ರ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಗೌಡ ಕುಚ್ಚೂರು ಸಂಚಾಲಕರಾದ ಕಿರಣ್ ಹೆಬ್ಬಾರ್ ಶಿರಿಬೈಲು, ಜೋರ್ಜ್ ಟಿ.ವಿ.ಮಲ್ಲಡ್ಕ, ಲಿಜೋ ಸ್ವರಿಯ ಬಲ್ಲಾಲ್ ಬೆಟ್ಟು, ಪ್ರಸಾದ್ ಗೌಡ ವಳಂಬ್ರ, ಸೂರಜ್ ವಳಂಬ್ರ, ಉದಯ ಗೌಡ ಪನಿಕಲ್ಲು, ಸಂತೋಷ್ ಬಲ್ಲಾಲ್‌ಬೆಟ್ಟು ಕಾನೂನು ಸಲಹೆಗಾರರಾದ ಗಣೇಶ್ ಗೌಡ ಬರಮೇಲು ಮಾಧ್ಯಮ ಸಂಚಾಲಕರಾದ ಬಾಲಚಂದ್ರ ನಾಯಕ್ ಹೇಡ್ಯಾ ಪ್ರವೀನ್ ಗೌಡ ನತರ್ಂಡ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net