ಕಾಡು ಪ್ರಾಣಿಗಳ ಉಪಟಳ ತಪ್ಪಿಸಲು ಮನವಿ

ಕಾಡು ಪ್ರಾಣಿಗಳ ಉಪಟಳ ತಪ್ಪಿಸಲು ಮನವಿ
Published on

ವಿರಾಜಪೇಟೆ: ಕಾಡು ಪ್ರಾಣಿಗಳ ಉಪಟಳ ತಪ್ಪಿಸಿ ಜನರನ್ನು ರಕ್ಷಿಸುವಂತೆ ಒತ್ತಾಯಿಸಿ ಕುಕ್ಲೂರು, ಬೆಳ್ಳರಿಮಾಡು, ಚೆಂಬೆಬೆಳ್ಳೂರು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಗ್ರಾಮ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಹುಲಿಯೊಂದು ಸಂಚರಿಸುತಿದ್ದು, ಸಾಕು ಪ್ರಾಣಿಗಳನ್ನು ಹೊತ್ತೊಯ್ಯುತ್ತಿದೆ. ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಂತೆ ವಲಯ ಅರಣ್ಯಾಧಿಕಾರಿ ಶಿವರಾಮ್ ಅವರಿಗೆ ಮನವಿ ಸಲ್ಲಿಸಿದರು.

ಥಾಮಸ್ ಡಿಸೋಜ ಮಾತನಾಡಿ, ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳ ಉಪಟಳದಿಂದ ಕಾಫಿ ಗಿಡಗಳಿಗೆ ಹಾನಿಯಾಗುತ್ತಿದೆ. ಇತ್ತೀಚೆಗೆ ಮನೆಯಲ್ಲಿ ಸಾಕಿದ್ದ ಸಾಕು ನಾಯಿಯೊಂದನ್ನು ಕಾಡು ಪ್ರಾಣಿ ಹೊತ್ತುಕೊಂಡು ಹೋಗಿದೆ. ಗ್ರಾಮದಲ್ಲಿ ಭಯದ ವಾತಾವರಣ ಏರ್ಪಟ್ಟಿದೆ. ಅರಣ್ಯ ಇಲಾಖೆ ಶೀಘ್ರ ಕಾರ್ಯಾಚರಣೆ ನಡೆಸಬೇಕೆಂದರು.

ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯ ಅಧಿಕಾರಿ ಶಿವರಾಮ್, ಹೆಣ್ಣು ಹುಲಿಯೊಂದು ಎರಡರಿಂದ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ತಾಯಿಯಿಂದ ಬೇರ್ಪಟ್ಟಿವೆ. ಇವುಗಳು ಗ್ರಾಮದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡು, ಸಾಕು ಪ್ರಾಣಿಗಳನ್ನು ಬೇಟೆಯಾಡುತ್ತಿವೆ. ಹುಲಿಯ ಹೆಜ್ಜೆ ಗುರುತು ಆಧಾರಿಸಿ ಇಲಾಖೆ ಸಿ.ಸಿ. ಕ್ಯಾಮರಾ ಅಳಡಿಸಿ ಚಲನವಲನಗಳನ್ನು ಗಮನಿಸಲಾಗುತ್ತಿದೆ. ಹುಲಿಯನ್ನು ಸೆರೆಹಿಡಿಯಲು ಬೋನು ವ್ಯವಸ್ಥೆ ಮಾಡಲಾಗಿದೆ ಎಂದರು.

ದಿನೇಶ್ ಪೊನ್ನಪ್ಪ. ರಂಜಿ, ಚಾರ್ಲಿ ಪಿಂಟೋ, ಜೀವನ್ ಪಿಂಟೋ, ಡಾಲಿ, ಕುಕ್ಲೂರು, ಬೆಳ್ಳಿರಮಾಡು, ಬೆಂಬೆಬೆಳ್ಳೂರು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net