

ರಾಮನಗರ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ ಕೊಡಿಸಿಕೊಡಬೇಕೆಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಹೊರಗುತ್ತಿಗೆ ಸಿಬ್ಬಂದಿಗಳು, ತಾಂತ್ರಿಕ ಸಹಾಯಕರು ಮನವಿ ಸಲ್ಲಿಸಿದರು.
ಮಂಗಳವಾರ ರಾಮನಗರದ ಜಿಲ್ಲಾ ಪಂಚಾಯತ್ ಭವನದ ಮುಂಭಾಗ ಸಿಬ್ಬಂದಿಗಳು ಸಂಸದರಿಗೆ ಮನವಿ ಸಲ್ಲಿಸಿದರು. ಕಳೆದ 15 ವರ್ಷಗಳಿಂದ ನರೇಗಾ ಯೋಜನೆಯಲ್ಲಿ ಹೊರಗುತ್ತಿಗೆಯಲ್ಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇವೆ. ಗ್ರಾಮೀಣ ಭಾಗಕ್ಕೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮ ಪ್ರತೀ ಬಡ ಕುಟುಂಬಕ್ಕೆ ಉದ್ಯೋಗ ಜೊತೆಗೆ ಗ್ರಾಮಕ್ಕೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಾವು ನಮ್ಮ ಕರ್ತವ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದೇವೆ.
ಕೋವಿಡ್ ಸಂಧರ್ಭದಲ್ಲಿ ಮನೆಯಲ್ಲಿ ಕೂರದೆ ಹೊರಬಂದು ದೂರದ ಊರಿಗೆ ಜನರು ಕೆಲಸಕ್ಕಾಗಿ ಹೋಗುವುದನ್ನು ತಪ್ಪಿಸುವ ದೃಷ್ಟಿಯಿಂದ ಉತ್ತಮ ಕಾಆರ್ಯ ನಿರ್ವಹಿಸಿ ಸರ್ಕಾರದ ಪ್ರಶಂಸೆಗೂ ಪಾತ್ರವಾಗಿದ್ದೇವೆ. ಆದರೆ ಇಂದು ನಮ್ಮ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಕಳೆದ ೪ ತಿಂಗಳಿAದ ವೇತನವಿಲ್ಲದೆ ನಮ್ಮ ಜೀವನ ಕಷ್ಟಕರವಾಗಿದೆ.
ಕಳೆದ ಫೆಬ್ರವರಿ ತಿಂಗಳಿAದ ಮೇ ತಿಂಗಳು ಕಳೆದು ಜೂನ್ ಬಂದರೂ ವೇತನ ಬಂದಿಲ್ಲ. ಒಂದೆರಡು ತಿಂಗಳು ಬರದಿದ್ದರೂ ಹೇಗೋ ಆರ್ಥಿಕ ಪರಿಸ್ಥಿತಿ ನಿಭಾಯಿಸಬಹುದು. ಆದರೆ ಸತತ ೪ ತಿಂಗಳೂ ಕಳೆದರೂ ವೇತನ ಬಂದಿಲ್ಲ. ಒಂದು ವರ್ಷದಿಂದ ಪ್ರಯಾಣ ಭತ್ಯೆ ಕೂಡ ಬಂದಿಲ್ಲ. ವೇತನದಿಂದಲೇ ಜೀವನ ನಡೆಸುವ ನಾವು ಪ್ರÀತಿದಿನ ಮನೆ ಸಾಮಾನು, ಮಕ್ಕಳ ಫೀ, ಬೈಕ್ ಪೆಟ್ರೋಲ್ ಮನೆಯಲ್ಲಿ ವಯಸ್ಸಾದ ತಂದೆ ತಾಯಿಗಳಿಗೆ ಆಸ್ಪತ್ರೆ ಔಷಧಿ ಖರ್ಚು ಇನ್ನಿತರ ಸಾಲಕ್ಕೆ ಬಡ್ಡಿ ಸೇರಿದಂತೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ.
ಕೂಡಲೇ ತಾವು ಸರ್ಕಾರದ ಮೇಲೆ ಒತ್ತಡ ತಂದು ನಮ್ಮ ಬಾಕಿ ವೇತನ ಬಿಡುಗಡೆಮಾಡಿಸಿ ಕೊಡಬೇಕೆಂದು ಲಿಖಿತ ಪತ್ರದಲ್ಲಿ ಸಂಸದರಿಗೆ ನರೇಗಾ ಹೊರಗುತ್ತಿಗೆ ಸಿಬ್ಬಂದಿಗಳು, ತಾಂತ್ರಿಕ ಸಹಾಯಕರು ಮನವಿ ಮಾಡಿ ಒತ್ತಾಯಿಸಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಪಿ.ಎಸ್. ಜಗದೀಶ್, ಮುಖಂಡರಾದ ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಜೈಕುಮಾರ್, ಕೆಂಪರಾಜು, ಉಮೇಶ್, ರಾಘವೇಂದ್ರ, ನಾಗೇಶ್, ಕಾಳಯ್ಯ ಮುಂತಾದವರಿದ್ದರು.