

ಹೆಬ್ರಿ: ಹೆಬ್ರಿಯ ಶಿವಪುರ ಬಿಲ್ಲುಬೈಲು ಬಳಿ 169ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲು ಮಣ್ಣು ತೆಗೆಯಲಾಗಿದ್ದು, ಕಂದಕ ನಿರ್ಮಾಣವಾಗಿ 4 ಮನೆಗಳು ಭಾರಿ ಎತ್ತರದಲ್ಲಿದ್ದು ಮನೆ ಹಾಗೂ ಮನೆಗಳಿಗೆ ಹೋಗುವ ರಸ್ತೆ ಕುಸಿಯುತ್ತಿದ್ದು ಅಪಾಯ ಎದುರಾಗಿದೆ. ಕೂಡಲೇ ತಡೆಗೋಡೆ ನಿರ್ಮಿಸುವಂತೆ ಸಮಾಜಸೇವಕ ಬೈಕಾಡಿ ಮಂಜುನಾಥ ರಾವ್ ಶಿವಪುರ ನೇತೃತ್ವದಲ್ಲಿ ಮನೆಯವರು ಜಿಲ್ಲಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ರಾಷ್ಟ್ರೀಯ ಹೆದ್ದಾರಿಯ ಪ್ರಾಜೆಕ್ಟ್ ಡೈರೆಕ್ಟರ್‌ಗೆ ಸೂಚಿಸಿದರು. ಬಿಲ್ಲುಬೈಲು ನಾತು ಪಾಣ ಮತ್ತು ಮನೆಯವರು ಹಾಜರಿದ್ದರು.