ಕುಂದಾಪುರ: ಇಲ್ಲಿನ ಭಾಗ್ಯವಂತ ರೋಜರಿ ಮಾತಾ ಚರ್ಚ್‌ನಲ್ಲಿ ಯುವಕ ಯುವತಿ ಮತ್ತು ಪಾಲಕರಿಗೆ ಕೌಟುಂಬಿಕ ಜೀವನದ ತಯಾರಿಗಾಗಿ ಶಿಬಿರ ಭಾನುವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿ ಉಡುಪಿ ಧರ್ಮ ಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕ ಲೆಸ್ಲಿ ಆರೋಜಾ ಮಾತನಾಡಿ, ಯುವಕ ಯುವತಿಯರು ತಮ್ಮ ಜೀವನ ಕಟ್ಟಿಕೊಳ್ಳುವಾಗ, ತಮ್ಮ ಜೀವನ ಸಂಗಾತಿ ಆರಿಸುವಾಗ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಮಕ್ಕಳು ಬೆಳೆಯುವಾಗ ಪಾಲಕರು ಸಾಂಗತ್ಯ ನೀಡಬೇಕು. ಮಕ್ಕಳು ಬೇರೆಡೆ ಇದ್ದರೂ ಅವರ ಕುರಿತು ಗಮನವಿರಬೇಕು ಎಂದರು.
ಕುಂದಾಪುರ ಚರ್ಚ್ ಧರ್ಮಗುರು ಪಾವ್ಲ್ ರೇಗೊ ಆಶೀರ್ವಚನ ನೀಡಿದರು. ಚರ್ಚ್ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಐಸಿವೈಎಂ ಸಂಘಟನೆಯ ಸಚೇತಕಿ ಶಾಂತಿ ಬಾರೆಟ್ಟೊ, ವೈಸಿಎಸ್ ಸಂಘಟನೆಯ ಸಚೇತಕಿ ಶೈಲಾ ಡಿ.ಆಲ್ಮೇಡಾ ಉಪಸ್ಥಿತರಿದ್ದರು.