

ಕಲಬುರಗಿ ನಗರದ ಅಪ್ಪನ ಕೆರೆಯ ಸುತ್ತಲೂ ಹಾಕಿದ್ದ ಗ್ರಿಲ್‌ಗಳನ್ನು ಮುರಿದು ಅದರೊಳಗೆ ಎಮ್ಮೆಗಳನ್ನು ನುಗ್ಗಿಸಿದವರ ವಿರುದ್ಧ ಬ್ರಹ್ಮಪುರ ಠಾಣೆಗೆ ಆರೋಗ್ಯ ನಿರೀಕ್ಷಕ ಕಲ್ಲಯ್ಯ ಬಸವಣ್ಣಯ್ಯ ದೂರು ನೀಡಿದ್ದಾರೆ. ಕೆರೆಯ ಗ್ರಿಲ್ ಮುರಿದು ಅತಿಕ್ರಮಣ ಪ್ರವೇಶ ಮಾಡಿ ಸರ್ಕಾರಿ ಆಸ್ತಿಗೆ ಹಾನಿ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.