ಲೋಕಾ ಬಲೆಗೆ ಎಪಿಎಂಸಿ ಕಾರ್ಯದರ್ಶಿ

Harihara, Lokayukta, complaint, acceptance,
Published on

ಚನ್ನಪಟ್ಟಣ:

ಟ್ರೇಡಿಂಗ್ ಲೈಸೆನ್ಸ್ ನೀಡಲು ವರ್ತಕರಿಂದ ಲಂಚ ಸ್ವೀಕರಿಸುತ್ತಿದ್ದ ನಗರದ ಎಂಪಿಎಂಸಿ ಕಾರ್ಯದರ್ಶಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ನಗರದ ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಶಶಿಕಲಾ ಬಲೆಗೆ ಬಿದ್ದಿರುವ ಅಧಿಕಾರಿ. ಶುಕ್ರವಾರ ಸಂಜೆ ಮಾರುಕಟ್ಟೆಯ ಟ್ರೇಡಿಂಗ್ ಲೈಸೆನ್ಸ್ ನೀಡಲು ವರ್ತಕರಿಂದ ೧೫ ಸಾವಿರ ಹಣ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಚನ್ನಪಟ್ಟಣ ನಗರದ ರೆಹಮತ್ ಅಲಿ ಎಂಬುವರು ಎಪಿಎಂಸಿ ಕಾರ್ಯದರ್ಶಿಯಾದ ಶಶಿಕಲಾ ರವರು ಟ್ರೇಡಿಂಗ್ ಲೈಸೆನ್ಸ್ ನೀಡಲು ಹಣ ಕೇಳುತ್ತಿದ್ದಾರೆ ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ‌ ಸ್ನೇಹಾ ಮಾರ್ಗದರ್ಶನದಲ್ಲಿ ‌ಲೋಕಾ ಅಧಿಕಾರಿಗಳು ಪೂರ್ವ‌ ನಿಯೋಜಿತವಾದ ವ್ಯೂಹ ರಚಿಸಿದರು. ರೆಹಮತ್ ಅಲಿ ಶಶಿಕಲಾ ರವರಿಗೆ ಹಣ ನೀಡಲು ಬಂದಾಗ ಶಶಿಕಲಾ ರವರ ಪರವಾಗಿ ಖಾಸಗಿ ವ್ಯಕ್ತಿ ಕೃಷ್ಣಮೂರ್ತಿ ಎಂಬುವವರು 15000 ಹಣವನ್ನು ಸ್ವೀಕಾರ ಮಾಡುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಬಂಧನ ಮಾಡಿದರು.

ಮಾರುಕಟ್ಟೆಯಲ್ಲಿ ಮಾವಿನ ಮಂಡಿಗೆ ಲೈನನ್ಸ್ ನೀಡಲು ಈ ಅಧಿಕಾರಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲೋಕಾಯುಕ್ತ ಡಿವೈಎಸ್ ಪಿ ಶಿವಪ್ರಸಾದ್, ಸಿಪಿಐ ಸಂದೀಪ್ ಕುಮಾರ್ ತಂಡ‌ ಲಂಚಬಾಕ ಅಧಿಕಾರಿಗಳನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net