ವಿದ್ಯಾರ್ಥಿಗಳಿಂದ ಯುದ್ಧ ವಿರೋಧಿ ರ್‍ಯಾಲಿ

vani
ಕೊಡ್ಲಮೊಗರು ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಯುದ್ಧ ವಿರೋಧಿ ರ್‍ಯಾಲಿ ನಡೆಯಿತು.
Published on

ಕಾಸರಗೋಡು: ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆ ಕೊಡ್ಲಮೊಗರುವಿನಲ್ಲಿ ಯುದ್ಧ ವಿರೋಧಿ ದಿನವನ್ನು ಆಚರಿಸಲಾಯಿತು. ಯುದ್ಧ ವಿರೋಧಿ ಘೋಷಣೆಯೊಂದಿಗೆ ವಿದ್ಯಾರ್ಥಿಗಳು ಶಾಲಾ ವಠಾರದಲ್ಲಿ ಮೆರವಣಿಗೆ ನಡೆಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಗ್ರೀಷ್ಮಾ ರ್‍ಯಾಲಿ ಉದ್ಘಾಟಿಸಿ, ಯುದ್ಧದಿಂದ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. ಶಿಕ್ಷಕಿಯರಾದ ಪ್ರತಿಭಾ, ಉಷಾ, ಶಶಿಕಲ ಮತ್ತು ಅಜಿತ್ ರ್‍ಯಾಲಿಯಲ್ಲಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net