ಜನವಿರೋಧಿ ಸರ್ಕಾರಕ್ಕೆ ಉಳಿಗಾಲವಿಲ್ಲ

FotoJet (3)
Published on

ಎಸ್‌ಎ್ಐ ರಾಷ್ಟ್ರೀಯ ಅಧ್ಯಕ್ಷ ಸಾನು ಹೇಳಿಕೆ | ಚಿಕ್ಕಬಳ್ಳಾಪುರದಲ್ಲಿ ಸಮ್ಮೇಳನ

ಚಿಕ್ಕಬಳ್ಳಾಪುರ : ಜಗತ್ತಿನಲ್ಲಿ ಬಡ ಜನ ವಿರೋಧಿ ನೀತಿಯ ನಾಯಕರು, ಸರ್ಕಾರಗಳಿಗೆ ಉಳಿಗಾಲವಿಲ್ಲ ಎಂಬ ಸಂದೇಶಾತ್ಮಕ ಬೆಳವಣಿಗೆಗಳು ಸಂಭವಿಸುತ್ತಿವೆ ಎಂದು ಎಸ್‌ಎ್ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ.ಸಾನು ಸಂತಸ ವ್ಯಕ್ತಪಡಿಸಿದರು.
ನಗರದ ಕೆಇಬಿ ವಸತಿ ಸಮುದಾಯ ಭವನದ ಎದುರು ಗುರುವಾರ ಹಮ್ಮಿಕೊಂಡಿದ್ದ ಸಂಘಟನೆಯ ರಾಜ್ಯಮಟ್ಟದ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.
ಹಿಂದಿನ ಸರ್ಕಾರಗಳ ದುರಾಡಳಿತ, ಅರಾಜಕತೆಗೆ ಶ್ರೀಲಂಕಾದಲ್ಲಿ ಎಡಪಂಥೀಯ, ಸಮಾಜವಾದಿ ನಾಯಕ ಅಧ್ಯಕ್ಷರಾಗಿದ್ದಾರೆ. ್ರಾನ್ಸ್ ಸೇರಿ ಹಲವು ದೇಶಗಳಲ್ಲಿ ಜನರು ಭ್ರಷ್ಟಾಚಾರ, ಬಡಜನ ವಿರೋಧಿ ನೀತಿಗಳ ನಾಯಕರನ್ನು ಅಧಿಕಾರದಿಂದ ಕೆಳಗಿಸುವ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಭಾರತದಲ್ಲೂ ಕ್ರಾಂತಿಕಾರಿ ಬದಲಾವಣೆ ಸಂಭವಿಸಲಿದೆ ಎಂದು ಭವಿಷ್ಯ ನುಡಿದರು.
ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಭಾರತವು ನಾಜಿ ಬೀಜಗಳನ್ನು ಬಿತ್ತಿ ಬೆಳೆಯುವ ಮಣ್ಣು ಅಲ್ಲ. ನಿರಂತರವಾಗಿ ಧರ್ಮ ರಾಜಕಾರಣ ನಡೆಯುವುದಿಲ್ಲ. ಸುಳ್ಳುಗಳಲ್ಲಿ ಕಟ್ಟಿದ ಸೌಧಗಳು ನಿಜವಾದ ದಾಳಿಗೆ ಉಳಿಯುವುದಿಲ್ಲ. ಇಲ್ಲಿ ಸಾಧು ಸಂತರು, ಸಮಾಜ ಸುಧಾರಕರು ಸೇರಿ ಅನೇಕ ಮಹನೀಯರು ಏಕತೆ ಮತ್ತು ಮಾನವೀಯತೆಯ ಮೌಲ್ಯಾಧಾರಿತ ತತ್ವಗಳನ್ನು ಸಾರಿ ಹೋಗಿದ್ದಾರೆ ಎಂದರು.
ಶಿಕ್ಷಣ, ರಾಜಕಾರಣ ಹಣ ಇದ್ದವರಿಗೆ ಎಂಬ ವಾತಾವರಣವು ನಿರ್ಮಾಣವಾಗುತ್ತಿದೆ. ಕಳ್ಳರು, ಅತ್ಯಾಚಾರಿಗಳು, ಭ್ರಷ್ಟರು ಮತ್ತು ಪ್ರಭಾವಿಗಳು ಸಂಸತ್ ಪ್ರವೇಶಿಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಲಾಗುತ್ತಿದೆ. ಬಡವರನ್ನು ಕಡೆಗಣಿಸಿ, ಶ್ರೀಮಂತರನ್ನು ಅಭಿವೃದ್ಧಿಪಡಿಸುವುದೇ ಆಡಳಿತ ನೀತಿಗಳಾಗಿವೆ. ಇವುಗಳನ್ನು ಪ್ರಶ್ನಿಸಿದಾಗ ದೇಶದ್ರೋಹಿ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಬೇಸರಿಸಿದರು.
ಕೆಂಪು ಮತ್ತು ನೀಲಿ ಕ್ರಾಂತಿಯು ಒಂದಾಗಿ ಹೋರಾಟ ನಡೆಸಿದಾಗ ನಿಜವಾದ ಆದರ್ಶ ಸಮಾಜವನ್ನು ಕಾಣಬಹುದು. ಯುವ ಜನತೆ ಉನ್ನತ ಶಿಕ್ಷಣದ ಅಧ್ಯಯನದ ಮೂಲಕ ವಾಸ್ತವ ವಿವೇಕವನ್ನು ಬೆಳೆಸಿಕೊಳ್ಳಬೇಕು ಎಂದರು.
ಎಸ್‌ಎ್ಐನ ರಾಷ್ಟ್ರೀಯ ಉಪಾಧ್ಯಕ್ಷ ನಿತೀಶ್ ನಾರಾಯಣ್, ಜಂಟಿ ಕಾರ್ಯದರ್ಶಿ ಆದರ್ಶ್, ರಾಜ್ಯಾಧ್ಯಕ್ಷ ಅಂಬರೀಷ್ ಕಡಗದ್, ಕಾರ್ಯದರ್ಶಿ ಭೀಮನಗೌಡ, ಮಹಿಳಾ ಸಂಚಾಲಕ ಸುಜಾತ, ಜಿಲ್ಲಾಧ್ಯಕ್ಷ ಸೋಮಶೇಖರ್, ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಸರ್ದಾರ್ ಚಾಂದಾಪಾಷಾ, ಅಧ್ಯಕ್ಷ ಡಾ ಅನಿಲ್ ಕುಮಾರ್, ಕಾರ್ಯದರ್ಶಿ ಬಿ.ಎನ್.ಮುನಿಕೃಷ್ಣಪ್ಪ ಮತ್ತಿತರರು ಇದ್ದರು.


ಕ್ರಾಂತಿಗೀತೆಗಳ ಗಾಯನ
ಸಮ್ಮೇಳನಕ್ಕೂ ಮೊದಲು ಕಲಾವಿದರಾದ ಗ.ನ.ಅಶ್ವತ್ಥ್ ನೇತೃತ್ವದಲ್ಲಿ ಚನ್ನರಾಯಪ್ಪ, ಸೋಮಶೇಖರ್, ಜತೆಗೆ ವಿದ್ಯಾರ್ಥಿಗಳ ಕ್ರಾಂತಿಗೀತೆಗಳ ಗಾಯನ ಗಮನ ಸೆಳೆಯಿತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೇ?, ಕಟ್ಟುತ್ತೇವಾ ನಾಡ ಕಟ್ಟುತ್ತೇವಾ, ತಂಪಾಗಿರುವ ಕೆಂಪು ಸಮುದ್ರದಲ್ಲಿ ಏನೇನೋ… ಸೇರಿ ಹಲವು ಗೀತೆಗಳನ್ನು ಹಾಡಲಾಯಿತು.


ಸನ್ಮಾನ, ಮೆರವಣಿಗೆ
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ವಿದ್ಯಾರ್ಥಿಗಳು ಬಾವುಟಗಳನ್ನು ಹಿಡಿದು ೋಷಣೆಗಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.


ಮೂರು ದಿನಗಳ ಸಮ್ಮೇಳನ
ರಾಜ್ಯಮಟ್ಟದ 16ನೇ ಸಮ್ಮೇಳನಕ್ಕೆ ತಮಟೆ ಬಾರಿಸುವುದರೊಂದಿಗೆ ಚಾಲನೆ ನೀಡಲಾಯಿತು. ಮೂರು ದಿನಗಳ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿ ಪ್ರತಿನಿಧಿಗಳು ಆಗಮಿಸಿದ್ದರು. ಮೊದಲ ದಿನ ಮೆರವಣಿಗೆ, ಬಹಿರಂಗ ಸಮಾವೇಶ ನಡೆಯಿತು. ಉಳಿದಂತೆ ಶುಕ್ರವಾರ ರಾಜ್ಯ ಕಾರ್ಯಕಾರಿಣಿ ಸಭೆ, ಸಂಘಟನೆ, ನಿರೀಕ್ಷೆಯ ಕಾರ್ಯಕ್ರಮಗಳು, ಅಭಿಪ್ರಾಯ ಮಂಡನೆ ಸೇರಿ ವಿವಿಧ ಚಟುವಟಿಕೆ ನಡೆಯಲಿದ್ದು ಶನಿವಾರ ಸಂಘಟನೆಗೆ ಹೊಸ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಯ ಜತೆಗೆ ಸಮ್ಮೇಳನದ ಹೊಸ ನಿಣರ್ಯಗಳ ೋಷಣೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net