

ಗುಂಡ್ಲುಪೇಟೆ: ನೆರೆಯ ಕೇರಳ ಮತ್ತು ತಮಿಳುನಾಡು ರಾಜ್ಯಗಳ ಗಡಿಯಾಗಿರುವ ಗುಂಡ್ಲುಪೇಟೆಯಲ್ಲಿ ಸೋಮವಾರ ರಾತ್ರಿ ಗಸ್ತು ನಡೆಸಿದ್ದ ನಕ್ಸಲ್ ನಿಗ್ರಹ ದಳ ಪೊಲೀಸರು ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಿಸಿದ್ದಾರೆ.
ತಾಲೂಕಿನ ತ್ರಿಯಂಭಕಪುರ ಗ್ರಾಮದ ಸಮೀಪ ತಪಾಸಣೆ ನಡೆಸಲು ಟಾಟಾ ಏಸ್ ಅಡ್ಡಗಟ್ಟಿದಾಗ ಚಾಲಕ ಪರಾರಿಯಾಗಿದ್ದಾನೆ. ಅನುಮಾನಗೊಂಡು ವಾಹನ ಪರಿಶೀಲಿಸಿದಾಗ ಕರುಗಳು ಪತ್ತೆಯಾಗಿವೆ.
ಟಾಟಾ ಏಸ್ ಅನ್ನು ತೆರಕಣಾಂಬಿ ಪೊಲೀಸ್ ಠಾಣೆ ವಶಕ್ಕೆ ನೀಡಿ ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ವಾಹನ ಸಂಖ್ಯೆ ಆಧರಿಸಿ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.