

ಸೋಮವಾರಪೇಟೆ: ತಾಲೂಕಿನ ಮಾದಾಪುರದ ಕಾರೇಕಾಡಿನ ಶ್ರೀ ಚೌಡೇಶ್ವರಿ ದೇವಾಲಯದ ವಾರ್ಷಿಕ ಪೂಜೆ ಸೋಮವಾರ ಮತ್ತು ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಪೂಜಾ ಅಂಗವಾಗಿ ದೇಗುಲದಲ್ಲಿ ಗಣಪತಿ ಹೋಮ ಸೇರಿದಂತೆ ವಿವಿಧ ಪೂಜೆಗಳನ್ನು ಅರ್ಚಕ ಪ್ರಸನ್ನ ಭಟ್ ನೆರವೇರಿಸಿದರು. ದೇವಾಲಯಕ್ಕೆ ಆಗಮಿಸಿದ ಎಲ್ಲರಿಗೂ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕಿಶೋರ್, ಪದಾಧಿಕಾರಿಗಳಾದ ರಾಜೇಶ್, ಪ್ರಸಾದ್, ಜಯರಾಮ್ ಇತರರಿದ್ದರು.