ವಯಸ್ಸಾದಾಗ ಸ್ವಸ್ಥ ಜೀವನಕ್ಕಾಗಿ ಕ್ರೀಡೆ ರೂಢಿಸಿಕೊಳ್ಳಿ- ಎಸ್ ಪಿ ವಿಷ್ಣುವರ್ಧನ

Krims News
Published on

ಕಾರವಾರ: ಎಲ್ಲರೂ ತಮ್ಮ ಜೀವನದಲ್ಲಿ ಯಾವುದಾದರೊಂದು ಆಟವನ್ನು ಹವ್ಯಾಸವಾಗಿ ರೂಢಿಸಿಕೊಳ್ಳುವುದರಿಂದ ವಯಸ್ಸಾದ ಮೇಲೂ ಉಲ್ಲಸಿತವಾಗಿರಲು ಸಾಧ್ಯ ಎಂದು ಎಸ್‌ಪಿ ಎನ್.ವಿಷ್ಣುವರ್ಧನ ಹೇಳಿದರು.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗಕ್ಕಾಗಿ ಎಲ್ಲೇ ಹೋದರೂ ತಾಯ್ನಾಡು, ತಾಯ್ನುಡಿ ಹಾಗೂ ತಂದೆ, ತಾಯಂದಿರನ್ನು ಮರೆಯಬೇಡಿ ಎಂದು ವೈದ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇದನ್ನೂ ಓದಿ:ಟಿಎಸ್ಎಸ್ ಚುನಾವಣೆ- ಹಾಲಿ ಆಡಳಿತ ಮಂಡಳಿಗೆ ತೀವ್ರ ಹಿನ್ನಡೆ
ಸಂಸ್ಥೆಯ ನಿರ್ದೇಶಕ ಡಾ. ಗಜಾನನ ನಾಯಕ, ವಿದ್ಯಾಭ್ಯಾಸದ ಜತೆಗೆ ಕ್ರೀಡೆಯು ಮಹತ್ವವಾಗಿದ್ದು, ಎಲ್ಲರೂ ಭಾಗವಹಿಸಿ ಎಂದು ಕರೆ ನೀಡಿದರು.

ಕ್ರಿಮ್ಸ್ ಮುಖ್ಯ ಆಡಳಿತಾಧಿಕಾರಿ ಟಿ. ಸಿ ಹಾದಿಮನಿ, ಪ್ರಾಂಶುಪಾಲ ಡಾ. ಶಿವಕುಮಾರ ಜಿ.ಎಲ್., ಆರ್‌ಎಂಒ ಡಾ. ಮಂಜುನಾಥ ಭಟ್,ಕ್ರೀಡಾ ಚೆರ್‌ಮನ್ ಡಾ. ಅಮಿತ್ ಕಾಮತ್, ಕ್ರೀಡಾ ಕಾರ್ಯದರ್ಶಿ ಮೋಹನ ಕುಮಾರ ಕೆ.ಸಿ ಉಪಸ್ಥಿತರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net