

ಬೈಂದೂರು: ಜಡ್ಕಲ್ ವಿವಿಧೋದ್ದೇಶ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಸೈಮನ್ ಜೋಸೆಫ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು, ಉಪಾಧ್ಯಕ್ಷ ಸಂತೋಷ್ ನಾಯ್ಕ, ನಿರ್ದೇಶಕರಾದ ಜೋಸೆಫ್ ಕೆ.ಜೆ, ಅಂತೋನಿ, ಚಂದ್ರ ಪೂಜಾರಿ, ಜೇಕಬ್, ಸಜಿ ಕೆ, ಚಂದ್ರ ಬೆಳಾರಿ, ಲಕ್ಷ್ಮೀ, ಸಿಸಿಲಿ ಜೋನ್ಸನ್ ಇದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಲಿ ಕೆ.ಬಿ ವರದಿ ವಾಚಿಸಿದರು. ಸುಚೇತನ್ ಬಿಲ್ಲವ ವಂದಿಸಿದರು.