ನೆಲ್ಯಾಡಿ ವಿವಿ ಘಟಕ ಕಾಲೇಜು ವಾರ್ಷಿಕೋತ್ಸವ

nellyadi
ನೆಲ್ಯಾಡಿಯ ವಿವಿ ಘಟಕ ಕಾಲೇಜಿನಲ್ಲಿ ಆರನೆಯ ವಾರ್ಷಿಕೋತ್ಸವದಲ್ಲಿ ಬೆಥನಿ ಕಾಲೇಜಿನ ಪ್ರಾಂಶುಪಾಲ ಜಾರ್ಜ್ ಟಿ.ಎಸ್ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ

ಶಿಕ್ಷಣ ಎನ್ನುವುದು ಕೇವಲ ಅಂಕ ಗಳಿಕೆಯಷ್ಟೇ ಅಲ್ಲ, ಬದುಕಿನ ಸರ್ವತೋಮುಖ ಬೆಳವಣಿಗೆಯ ಮೂಲಕ ಸಮಾಜದ ಶ್ರೇಯಸ್ಸಿನಲ್ಲಿ ತೊಡಗುವಂತೆ ಮಾಡುವುದೇ ಶಿಕ್ಷಣ. ವಾಟ್ಸಾಪ್ ಮೂಲಕ ಗುರು ಮತ್ತು ಗುರಿಯಿಲ್ಲದ ಪಯಣ ಹೆಚ್ಚಾಗುತ್ತಿದೆ ಎಂದು ನೂಜಿಬಾಳ್ತಿಲ ಬೆಥನಿ ಕಾಲೇಜಿನ ಪ್ರಾಂಶುಪಾಲ ಜಾರ್ಜ್ ಟಿ.ಎಸ್ ಹೇಳಿದರು.

ನೆಲ್ಯಾಡಿಯ ವಿಶ್ವವಿದ್ಯಾಲಯ ಘಟಕ ಕಾಲೇಜಿನಲ್ಲಿ ಆರನೆಯ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪ್ರಾಂಶುಪಾಲ ಡಾ.ಸುರೇಶ್ ಮಾತನಾಡಿ, ಮಂಗಳೂರು ವಿವಿಯ ಘಟಕ ಕಾಲೇಜು, ಈ ಭಾಗದ ವಿದ್ಯಾರ್ಥಿಗಳಿಗೆ ಕಳೆದ ಆರು ವರ್ಷಗಳಿಂದ ತನ್ನ ಕಾರ್ಯ ಚಟುವಟಿಕೆಗಳ ಮೂಲಕ ಆಶಾಕಿರಣವಾಗಿದೆ ಎಂದರು.

ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ನೆಲ್ಯಾಡಿ ಗ್ರಾಪಂ ಅಧ್ಯಕ್ಷ ಸಲಾಂ ಬಿಲಾಲ್, ಪಿಡಿಒ ಆನಂದ್, ಕಾರ್ಯದರ್ಶಿ ಶಿವಪ್ರಸಾದ್, ಅಂಗು, ಉಪನ್ಯಾಸಕ ವಿಶ್ವನಾಥ ಶೆಟ್ಟಿ, ಪ್ರಮುಖರಾದ ರವಿಚಂದ್ರ ಹೊಸವೊಕ್ಲು, ಸುಪ್ರೀತಾ ಹೊಸವೊಕ್ಲು, ಸತೀಶ್ ದುರ್ಗಾಶ್ರೀ, ರಾಮಯ್ಯ ಶೆಟ್ಟಿ ಹಾಗೂ ವಿದ್ಯಾರ್ಥಿ ಸಂಘದ ಸಂಚಾಲಕ ಸುರೇಶ್ ಕೆ. ಉಪಸ್ಥಿತರಿದ್ದರು.

ಕನ್ನಡ ವಿಭಾಗ ಮುಖ್ಯಸ್ಥ ಡಾ.ನೂರಂದಪ್ಪ ವರದಿ ಮಂಡಿಸಿದರು. ಉಪನ್ಯಾಸಕಿ ವೆರೊಣಿಕ ಪ್ರಭಾ ಹಾಗೂ ಉಪನ್ಯಾಸಕ ಅಶ್ವಥ್ ಸಾಲಿಯಾನ್ ಬಹುಮಾನ ವಿತರಣೆ ನಡೆಸಿಕೊಟ್ಟರು. ದಿವ್ಯಶ್ರೀ ಜಿ. ಸ್ವಾಗತಿಸಿದರು. ಇತಿಹಾಸ ವಿಭಾಗ ಮುಖ್ಯಸ್ಥ ಡಾ.ಸೀತಾರಾಮ್ ಪಿ. ವಂದಿಸಿದರು. ಉಪನ್ಯಾಸಕ ಸಚಿನ್ ಎನ್.ಟಿ ಹಾಗೂ ಶ್ರುತಿ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net